ಮಧ್ಯಪ್ರದೇಶದಲ್ಲಿ ಅಮಾಯಕ ಬಾಲಕಿಯ ಸಜೀವ ದಹನ
ಭೋಪಾಲ್, ಸೆ. 18 : ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಬಂಟಾರಾ ಗ್ರಾಮದಲ್ಲಿ 13 ವರ್ಷದ ಬಾಲಕಿಯೋರ್ವಳನ್ನು ಆಕೆಯ ಸಹಪಾಠಿಗಳೇ ಬುಧವಾರ ರಾತ್ರಿ ಜೀವಂತ ಸುಟ್ಟುಹಾಕಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ವಿದಿಶಾ ಜಿಲ್ಲೆಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗುರುವಾರ ಬೆಳಿಗ್ಗೆ ಕೊನೆಯುಸಿರೆಳೆದಳು.
ಓರ್ವ ಹಿರಿಯ ವಿದ್ಯಾರ್ಥಿ ಮತ್ತು ಇಬ್ಬರು ಸಹಪಾಠಿಗಳ ಹೆಸರನ್ನು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಆ ಅಮಾಯಕ ಬಾಲಕಿ ನೀಡಿದ್ದೇ ಆಕೆಗೆ ಮುಳುವಾಯಿತು. ಆಕೆಯ ಕೊಲೆಗೆ ಸಂಚು ಹೂಡಿದ ಮೂವರು ವಿದ್ಯಾರ್ಥಿಗಳು ಅವಳನ್ನು ಜೀವಂತ ಸುಟ್ಟುಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಾಪರಾಧಿ ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.
(ಏಜೆನ್ಸೀಸ್)












Click it and Unblock the Notifications