ಪೇಸ್-ಬ್ಲಾಕ್ಗೆ ಯುಎಸ್ ಮಿಶ್ರ ಡಬಲ್ಸ್ ಕಿರೀಟ

paes-clara wins US open mixed doublesನ್ಯೂಯಾರ್ಕ್, ಸೆ. 5 : ಯುಎಸ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್ ಹಾಗೂ ಜಿಂಬಾಬ್ವೆಯ ಕಾರ ಬ್ಲಾಕ್ ಜಯಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪೇಸ್ ಮತ್ತು ಬ್ಲಾಕ್ ಜೋಡಿ ಯುಎಸ್‌ನ ಲೀಜೆಲ್ ಹುಬೆರ್ ಮತ್ತು ಬ್ರಿಟನ್‌ನ ಜಮೈ ಮುರ್ರೆ ಅವರನ್ನು 7-6, 6-4ಪಾಯಿಂಟ್‌‍ಗಳಿಂದ ಸೋಲಿಸಿದರು.

ಈ ಪಂದ್ಯ ಗೆಲ್ಲುವ ಮೂಲಕ ಲಿಯಾಂಡರ್ ಪೇಸ್ 2 ಯುಎಸ್ ಓಪನ್ ಹಾಗೂ ಯುಎಸ್ ಮಿಶ್ರ ಡಬಲ್ಸ್‌ನಲ್ಲಿ 4 ಗ್ರ್ಯಾಂಡ್ ಸ್ಲಾಮ್‌ಗಳನ್ನು ಗಳಿಸಿದಂತಾಗಿದೆ. ಕಿಕ್ಕಿರಿದ ಆರ್ಥರ್ ಆಶ್ ಟೆನ್ನಿಸ್ ಮೈದಾನದಲ್ಲಿ ಪೇಸ್-ಬ್ಲಾಕ್ ಜೋಡಿ ಯುಎಸ್-ಬ್ರಿಟನ್ ಜೋಡಿಯನ್ನು ಸುಲಭವಾಗಿ ಮಣಿಸಿತು. 29ರ ಹರೆಯದ ಬ್ಲಾಕ್ ತನ್ನ ವೃತ್ತಿ ಜೀವನದ ಪ್ರಥಮ ಗ್ರ್ಯಾಂಡ್ ಸ್ಲಾಮ್ ಗೆದ್ದರು.

ವಿಶ್ವದ ನಂ.1 ಸ್ಥಾನದಲ್ಲಿರುವ ಬ್ಲಾಕ್ ಆರಂಭದಿಂದಲೂ ಪೇಸ್‌ಗೆ ಉತ್ತಮ ಸಾಥ್ ಫೈನಲ್ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಬ್ಲಾಕ್ 3 ಬಾರಿ ವಿಂಬಲ್ಡನ್ ಡಬಲ್ಸ್ ಮತ್ತು 1ಬಾರಿ ಆಸ್ಟ್ರೇಲಿಯಾ ಓಪನ್ ಗೆದ್ದಿದ್ದಾರೆ.

(ದಟ್ಸ್‌ಕನ್ನಡ ಕ್ರೀಡಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+