ಆ. 30 ರಂದು ಡುಂಡಿರಾಜ್ ರ ಫಿಶ್ ಮಾರ್ಕೆಟ್ ಶುರು
ಬೆಂಗಳೂರು, ಆ. 27 : ಹಾಸ್ಯ ಕವಿ, ಚುಟುಕು ಬರಹಗಾರ ಹಾಗೂ ಅಂಕಣಕಾರ ಎಚ್.ಡುಂಡಿರಾಜ್ ನೇತೃತ್ವದಲ್ಲಿ ಫಿಶ್ ಮಾರ್ಕೆಟ್ ನಲ್ಲಿ ಏನ್ ಮಾಡ್ತಿದೀರಿ ಡುಂಡಿ? ಎಂಬ ಹೆಸರಿನಡಿಯಲ್ಲಿ ನಗರದ ಯಮುನಾ ಬಾಯಿ ರಸ್ತೆಯ ಮೇಫ್ಲವರ್ ಮೀಡಿಯಾ ಹೌಸ್ ಆ. 30 ರಂದು ಸಂಜೆ 6 ರಿಂದ 7.30ರ ವರೆಗೆ ನಕ್ಕು ನಗಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ.
ಸದ್ಯಕಿದು ಗದ್ದಲ ಸಂತಿ ಎನ್ನುವ ಅಡಿ ಬರಹ ಹೊಂದಿರುವ ಕಾರ್ಯಕ್ರಮ ಹಂಡ್ರೆಡ್ ಪರ್ಸೆಂಟ್ ನಕ್ಕು ನಗಿಸುವ ಕಾರ್ಯಕ್ರವಾಗಿದೆ. ದಿನ ಜಂಜಾಟದ ನಡುವೆ ಕೆಲ ಹೊತ್ತು ಹೊಟ್ಟೆ ತುಂಬ ನಕ್ಕು ಬರೋಣ ಎನ್ನುವುದಾದರೆ ಸರ್ವರಿಗೂ ಸುಸ್ವಾಗತ. ಡುಂಡಿರಾಜ್ ಅವರ ಫಿಶ್ ಮಾರ್ಕೆಟ್ ನಲ್ಲಿ ಏನ್ ಮಾಡ್ತಿದ್ದಾರೆ ಎನ್ನುವ ಕುತೂಹಲ ನಮಗೂ ಇದೆ. ಡುಂಡಿ ಅವರ ಹಾಸ್ಯ ಪ್ರಜ್ಞೆ ಬಗ್ಗೆ ಎರಡು ಮಾತಿಲ್ಲ. ರಜೆ ಸಮಯವಿರುವುರಿಂದ ಕೆಲ ಗಂಟೆ ಹೊತ್ತು ನಕ್ಕು ಹೋಗಿ ಮತ್ತೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications