ಬೀಜಿಂಗ್ ಒಲಿಂಪಿಕ್ಸ್ 2008 ಕ್ರೀಡಾಕೂಟಕ್ಕೆ ತೆರೆ

Beijing bids adieu to Olympics 2008ಬೀಜಿಂಗ್, ಆ. 24 : ಹದಿನಾರು ದಿನಗಳ ಬೀಜಿಂಗ್ ಕ್ರೀಡಾಕೂಟದ ಸಂಭ್ರಮದ ಹಬ್ಬಕ್ಕೆ ಭಾನುವಾರ ಸಂಜೆ ಅದ್ಧೂರಿಯಾಗಿ ತೆರೆ ಬಿದ್ದಿತು. ಮತ್ತೊಮ್ಮೆ ಬಣ್ಣದ ಬೆಳಕಿನ ಆಟದ ನಡುವೆ ಗಾನ,ನರ್ತನ ನಡುವೆ ಅದ್ಭುತವಾಗಿ ಕ್ರೀಡಾಕೂಟದ ಸಮಾರೋಪ ಕಾರ್ಯಕ್ರಮ ಮುಕ್ತಾಯಗೊಂಡಿತು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅರ್ಧದಷ್ಟು ಕಲಾವಿದರು ಮುಕ್ತಾಯ ಸಮಾರಂಭದಲ್ಲಿ ಕೂಡಾ ಪಾಲ್ಗೊಂಡಿದ್ದರು. ಏಳು ಸಾವಿರ ಕಲಾವಿದರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟ ಮೆರಗು ತಂದುಕೊಟ್ಟರು. ಆಧುನಿಕ ಒಲಿಂಪಿಕ್ ಕಂಡರಿಯದ ಕೂಟ ಸಂಘಟಿಸಿರುವ ಚೀನಾ ಅಷ್ಟೇ ಸಂಭ್ರಮದಿಂದ ಕ್ರೀಡಾಕೂಟವನ್ನು ಮುಕ್ತಾಯಗೊಳಿಸಿತು.

ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ನಿರ್ದೇಶಕ ಚೀರಾಗಿದ್ದ ಸಿನಿಮಾ ನಿರ್ಮಾಪಕ ಝಾಂಗ್ ಇವೋವ್ ಅವರು ಅಂತಿಮ ದಿನದ ಕಾರ್ಯಕ್ರಮ ನಿರ್ವಹಿಸಿದರು. ಸಾಮಾನ್ಯವಾಗಿ ಪ್ರತಿಯೊಂದು ಒಲಿಂಪಿಕ್ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಮುಂದಿನ ಒಲಿಂಪಿಕ್ ನಡೆಸುವ ರಾಷ್ಟ್ರಕ್ಕೆ ಒಲಿಂಪಿಕ್ ಧ್ವಜವನ್ನು ಹಸ್ತಾಂತರಿಸುವ ಕಾರ್ಯಕ್ರಮ ಬಿಟ್ಟರೆ ಬೇರೇನೂ ಇರುವುದಿಲ್ಲ. ಸಾಮಾನ್ಯವಾಗಿ ಸಮಾರೋಪ ಸಮಾರಂಭವನ್ನು ಸರಳವಾಗಿ ಆಚರಿಸಲಾಗುತ್ತದೆ.

ಆದರೆ ಚೀನಾ ಸಾಂಸ್ಕೃತಿಕ ಜಗತ್ತನ್ನು ವಿಶ್ವಕ್ಕೆ ತೋರಿಸುವ ಕಾರ್ಯಕ್ರಮವನ್ನು ಚೀನಾ ಒಲಿಂಪಿಕ್ಸ್ ಸಮಿತಿ ಮತ್ತೊಮ್ಮೆ ನಡೆಸಿಕೊಟ್ಟಿತು. ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟವು 2012ರಲ್ಲಿ ಲಂಡನ್ ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಇಂದಿನ ಸಮಾರೋಪ ಸಮಾರಂಭದಲ್ಲಿ ಲಂಡನ್ನಿನ ಎಂಟು ನಿಮಿಷಗಳ ಕಾರ್ಯಕ್ರಮ ನಡೆಯಿತು. ಮೈಕೆಲ್ ಫೆಲ್ಸ್ಟ್, ಡೆವಿಡ್ ಬೆಕ್ ಹ್ಯಾಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಾಯಕ ಲಿಯೋನಾ ಲೂಯಿಸ್ ಮತ್ತು ಲೆಡ್ ಝೆಪ್ಲಿನ್ ಕಾರ್ಯಕ್ರಮಕ್ಕೆ ಸಂಗೀತದ ಮೆರಗು ನೀಡಿದರು.

ತೃಪ್ತಿ ತಂದ ಭಾರತದ ಸಾಧನೆ:
ಭಾರತದ ಬಾಕ್ಸರ್ ಹಾಗೂ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಕಂಚು ಪದಕ ಪಡೆದಿರುವ ವಿಜೇಂದರ್ ಕುಮಾರ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜ ಹಿಡಿದು ಪಥಸಂಚಲನ ನಡೆಸಿದರು. 75 ಕೆಜಿ ಬಾಕ್ಸಿಂಗ್ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸುವ ಮೂಲಕ ವಿಜೇಂದರ್ ಭಾರತಕ್ಕೆ ಕಂಚಿನ ಪದಕ ಗಳಿಸುವಲ್ಲಿ ಯಶಸ್ವಿಯಾಗಿದ್ದರು.

ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತದ ಸಾಧನೆ ಗಮನಾರ್ಹವಾಗಿದೆ. ಪ್ರತಿ ಸಲವೂ ಒಂದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳುತ್ತಿದ್ದ ಭಾರತೀಯ ಕ್ರೀಡಾಪ್ರೇಮಿಗಳಿಗೆ ಈ ಸಲ ಭಾರತೀಯ ಕ್ರೀಡಾಪಟುಗಳು ಮೂರು ಪದಕಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಶೂಟಿಂಗ್ ವಿಭಾಗದಲ್ಲಿ ಮೊಟ್ಟಮೊದಲ ಬಾರಿಗೆ ವೈಯಕ್ತಿಕ ಚಿನ್ನದ ಪದಕ ಗಳಿಸಿದ ಅಭಿನವ್ ಬಿಂದ್ರಾ ಐತಿಹಾಸಿಕ ದಾಖಲೆಯನ್ನು ಬರೆದರು. ಕುಸ್ತಿಯಲ್ಲಿ ಸುಶೀಲ್ ಕುಮಾರ್ ಕಂಚು ಪಡೆಯುವ ಮೂಲಕ ಎರಡನೇ ಪದಕವನ್ನು ಭಾರತದ ಪಟ್ಟಿಗೆ ಸೇರಿಸಿದರು. ಒಲಿಂಪಿಕ್ಸ್ ಕ್ರೀಡಾಕೂಟದ ಬಾಕ್ಸಿಂಗ್ ನಲ್ಲಿ ಭಾರತ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ವಿಜೇಂದರ್ ಕಂಚು ಪದಕವನ್ನು ಪ್ರಥಮ ಬಾರಿಗೆ ತನ್ನದಾಗಿಸಿಕೊಂಡರು. ಉಳಿದಂತೆ ಅಖಿಲ್ ಕುಮಾರ್, ಚೇತನ್ ಕುಮಾರ್, ಸೈನಾ ನೆಹ್ವಾಲ್ ಕ್ರೀಡಾಕೂಟದಲ್ಲಿ ಉತ್ತಮ ಆಟ ಪ್ರದರ್ಶಿಸಿದರು.

ವಿಶೇಷವಾದ ಒಲಿಂಪಿಕ್ಸ್ :
ಅಮೆರಿಕ ಹೆಚ್ಚು ಪದಕ(36 ಚಿನ್ನ,38ಬೆಳ್ಳಿ,36 ಕಂಚು;ಒಟ್ಟು110 ಪದಕ) ಗಳಿಸಿದರೆ, ಅತಿಥೇಯ ಚೀನಾ (51 ಚಿನ್ನ,21ಬೆಳ್ಳಿ,28 ಕಂಚು;ಒಟ್ಟು100 ಪದಕ) ಹೆಚ್ಚು ಚಿನ್ನದ ಪದಕ ಗಳಿಸಿ ತಮ್ಮ ಪಾರಮ್ಯ ಮೆರೆಯಿತು.ಭಾರತ ಒಂದು ಚಿನ್ನ, ಎರಡು ಕಂಚು, ಒಟ್ಟಾರೆ 3 ಪದಕಗಳೊಂದಿಗೆ 50 ನೇ ಸ್ಥಾನ ಗಳಿಸಿದ ಸಾಧನೆ ಮೆರೆಯಿತು.
ಕೆಲವು ಮುಖ್ಯಾಂಶಗಳು:
* ಪುರುಷರಈಜಿನಲ್ಲಿ ಅಮೆರಿಕದ ಮೈಕ್ಲ್ ಫೆಲ್ಷ್ 8 ಚಿನ್ನ , ವಿಶ್ವದಾಖಲೆ
*ಮಹಿಳೆಯರ 400 ಮೀ ಈಜಿನಲ್ಲಿ ಅಮೆರಿಕದ ಸ್ಟಿಫನಿ ರೈಸ್, ವಿಶ್ವದಾಖಲೆ
*ಪುರುಷರ 4x100 ರಿಲೇ ಈಜಿನಲ್ಲಿ ಅಮೆರಿಕ ತಂಡದಿಂದ ವಿಶ್ವದಾಖಲೆ, ಚಿನ್ನ ಗಳಿಕೆ.
*ಮಹಿಳೆಯರ 100 ಮೀ.ಬ್ಯಾಕ್ ಸ್ಟ್ರೋಕ್ ನಲ್ಲಿ ಜಿಂಬಾಬ್ವೆಯ ಕ್ರಿಸ್ಟಿ ವಿಶ್ವದಾಖಲೆ
* ಅಥ್ಲೆಟಿಕ್ಸ್ ನಲ್ಲಿ ಜಮೈಕಾದ ಉಸೇನ್ ಬೋಲ್ಟ್ (100 ಮೀ. 200 ಮೀ ಹಾಗೂ 4X100 ರಿಲೇ) ಮೂರು ವಿಶ್ವದಾಖಲೆ
*ಆರ್ಚರಿಯಲ್ಲಿ ಕೋರಿಯಾ, ಪುರುಷರ ಕ್ವಾಡ್ರುಪಲ್ ಸ್ಕಲ್ ನಲ್ಲಿ ಆಸ್ಟ್ರೇಲಿಯಾ, ತೂಕ ಎತ್ತುವ ಸ್ಪರ್ಧೆಯಲ್ಲಿ ಚೀನಾ ಹಾಗೂ ಬೆಲಾರೂಸ್ ದೇಶದಿಂದ ವಿಶ್ವದಾಖಲೆ ಸ್ಥಾಪನೆ.
*ಈಜಿನಲ್ಲಿ ಅಮೆರಿಕ ಪ್ರಾಬಲ್ಯ ಮೆರದು ಅನೇಕ ವಿಶ್ವದಾಖಲೆಗಳನ್ನು ಮುರಿಯಿತು.
*ಭಾರತದ ಅಭಿನವ್ ಬಿಂದ್ರಾ ಶೂಟಿಂಗ್ ನಲ್ಲಿ ವೈಯಕ್ತಿಕ ಚಿನ್ನ ಗಳಿಸಿದ ಸಾಧನೆ.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+