ಶಾಸಕರ ಅಮೆರಿಕ ಪ್ರವಾಸ ಪ್ರಶ್ನಿಸಿ ರಿಟ್ ಅರ್ಜಿ

B.S. Yeddyurappaಬೆಂಗಳೂರು, ಆ. 21 : ಅಮೆರಿಕಾದ ಶಿಕಾಗೋದಲ್ಲಿ ನಡೆಯುತ್ತಿರುವ 'ಅಕ್ಕ' ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಶಾಸಕರ ದಂಡಿನಿಂದ ಸಾರ್ವಜನಿಕ ಹಣ ದುರುಪಯೋಗವಾಗುತ್ತಿದೆ. ಆದ್ದರಿಂದ ಅಮೆರಿಕಕ್ಕೆ ಹೋಗಲು ಶಾಸಕರಿಗೆ ಅವಕಾಶ ನೀಡಬಾರದೆಂದು ಆಗ್ರಹಿಸಿ ಎಸ್. ವಾಸುದೇವ್ ಎಂಬ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಆಗಸ್ಟ್ 29ರಿಂದ 31ರವರೆಗೆ ನಡೆಯುತ್ತಿರುವ 'ಅಕ್ಕ' ವಿಶ್ವ ಕನ್ನಡ ಸಮ್ಮೇಳನಕ್ಕೆ ಯಡಿಯೂರಪ್ಪ ಸೇರಿದಂತೆ ಅವರ ಆಪ್ತ ವಲಯದ ಶಾಸಕರು, ಅಧಿಕಾರಿಗಳು ಪರಿವಾರದ ಸಮೇತ ತೆರಳುತ್ತಿದ್ದಾರೆ. ತಂಡದಲ್ಲಿ ಒಟ್ಟು 115 ಜನ ಇದ್ದಾರೆ. ಸಮ್ಮೇಳನ ಮುಗಿದ ನಂತರವೂ ಅಮೆರಿಕಾದ ಇತರ ಪ್ರಾಂತ್ಯಗಳಿಗೆ ಅವರ ಪ್ರವಾಸ ಮುಂದುವರಿಯಲಿದೆ.

ಶಾಸಕರ ಪ್ರವಾಸಕ್ಕೆ ಬಜೆಟ್‌ನಲ್ಲಿಯೂ ಯೂವುದೇ ಹಣವನ್ನು ನಿಗದಿಪಡಿಸಲಾಗಿಲ್ಲ. ಅಲ್ಲದೆ, ಅವರ ಪಾಲ್ಗೊಳ್ಳುವಿಕೆಯಿಂದ ಕನ್ನಡ ಭಾಷೆ, ಸಾಹಿತ್ಯಕ್ಕೆ ಎಳ್ಳಷ್ಟೂ ಪ್ರಯೋಜನವಿಲ್ಲ. ಅವರ ಪ್ರವಾಸವೂ ಕಾನೂನುಬಾಹಿರವಾದುದು ಎಂದು ವಾಸುದೇವ್ ಅವರು ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅತಿವೃಷ್ಟಿಯಿಂದ ರಾಜ್ಯ ತೀವ್ರ ಸಂಕಷ್ಟ ಅನುಭವಿಸುತ್ತಿದೆ. ಶಾಸಕರು ರಾಜ್ಯದಲ್ಲಿದ್ದು ಪರಿಹಾರ ಕಾರ್ಯವನ್ನು ಕೈಗೊಳ್ಳುವ ಅಗತ್ಯವಿದೆ. ಇಂಥ ಸಂದರ್ಭದಲ್ಲಿ ಶಾಸಕರ ಜಂಬೋ ಪಡೆ ಅಮೆರಿಕಕ್ಕೆ ತೆರಳುತ್ತಿರುವುದು, ಹಣ ದುರುಪಯೋಗವಾಗುತ್ತಿರುವುದು ಸಲ್ಲದು. ಅವರ ಪ್ರವಾಸವನ್ನು ರದ್ದುಪಡಿಸಬೇಕೆಂದು ವಕೀಲರು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.

ಯಡಿಯೂರಪ್ಪನವರ ಅಮೆರಿಕ ಪ್ರವಾಸ ಈಗಾಗಲೆ ನಿಗದಿಯಾಗಿದ್ದು, ಆಗಸ್ಟ್ 27ರ ರಾತ್ರಿ ಅಮೆರಿಕಕ್ಕೆ ಪಯಣ ಬೆಳೆಸಲಿದ್ದಾರೆ. ಅವರು ಅಮೆರಿಕಕ್ಕೆ ತೆರಳುವ ಮೊದಲು ಲಂಡನ್‌ಗೂ ಪ್ರಯಾಣ ಬೆಳೆಸಬೇಕಾಗಿತ್ತು. ಆದರೆ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಕಾರಣ ಲಂಡನ್ ಪ್ರಸಾವನ್ನು ರದ್ದುಪಡಿಸಿದರು. ಆದರೆ, ಶಾಸಕರ ಒತ್ತಾಯಕ್ಕೊಲಿದು ಅಮೆರಿಕ ಪ್ರವಾಸವನ್ನು ಜಾರಿಯಲ್ಲಿಟ್ಟರು. ಮುಖ್ಯಮಂತ್ರಿ ಹೊರತಾಗಿ ಉಳಿದವರಿಗೆ 'ಅಕ್ಕ'ಳಿಂದ ಅಧಿಕೃತ ಆಹ್ವಾನವಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರ ಅಮೆರಿಕ ಪ್ರವಾಸಕ್ಕೆ ರಾಜಕೀಯ ವಲಯದಿಂದಲೂ ಪ್ರತಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರವಾಸ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಯಡಿಯೂರಪ್ಪ ಅಮೆರಿಕ ಪ್ರವಾಸ ಖಚಿತ
ಯಡಿಯೂರಪ್ಪ ಅಮೆರಿಕಾ ಪ್ರವಾಸ ದಿನಚರಿ
'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್
ಶಿಕಾಗೋ ಕನ್ನಡ ಸಮ್ಮೇಳನದ ನಾಡಿಮಿಡಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+