ಸೇಲಂನಲ್ಲಿ ಮತ್ತೆ ಕಾಡುತ್ತಿರುವ ವೀರಪ್ಪನ್ ನೆನಪು
ಸೇಲಂ,ಆ.19:ದಂತಚೋರ, ಕಾಡುಗಳ್ಳ ವೀರಪ್ಪನ್ ಪೊಲೀಸರ ಗುಂಡಿಗೆ ಬಲಿಯಾಗಿ ನಾಲ್ಕು ವರ್ಷಗಳೇ ಸರಿದು ಹೋಗಿವೆ. ಆದರೂ ಆತನ ಬಗೆಗೆ ಜನರಿಗಿದ್ದ ಕುತೂಹಲ ಮಾತ್ರ ಇನ್ನೂ ತಣ್ಣಗಾಗಿಲ್ಲ ಎಂಬ ವಿಚಾರ ತಮಿಳುನಾಡಿನ ಸೇಲಂನಲ್ಲಿ ಏರ್ಪಡಿಸಿರುವ ವೀರಪ್ಪನ್ಗೆ ಸಂಬಂಧಿಸಿದ ವಸ್ತು ಪ್ರದರ್ಶನ ನೋಡಿದರೆ ಸ್ಪಷ್ಟವಾಗುತ್ತದೆ.
ವೀರಪ್ಪನ್ ಬಳಸುತ್ತಿದ್ದ ಆಯುಧಗಳು,ಬಟ್ಟೆ,ರೇಡಿಯೋ,ನಕ್ಷೆಗಳು ಹಾಗೂ ಔಷಧಿಗಳು ವೀಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಪ್ರದರ್ಶನದಲ್ಲಿ ಇಟ್ಟಿರುವ ರಕ್ತದ ಒತ್ತಡವನ್ನು ಅಳೆಯುವ ಸಾಧನವಂತೂ ಪ್ರದರ್ಶನದ ಕೇಂದ್ರ ಬಿಂದು ಎಂತಲೇ ಹೇಳಬೇಕು.
ವೀರಪ್ಪನ್ಗೆ ಸಂಬಂಧಿಸಿದ ಇಷ್ಟೆಲ್ಲಾ ವಸ್ತುಗಳನ್ನು ಪ್ರದರ್ಶನದಲ್ಲಿ ನೋಡುತ್ತಿದ್ದರೆ ನಮಗೆ ಆಶ್ಚರ್ಯವಾಗುತ್ತದೆ. ವೀರಪ್ಪನ್ ಬಗೆಗಿನ ಆಸಕ್ತಿಯನ್ನು ಈ ಪ್ರದರ್ಶನ ತಣಿಸುತ್ತಿದೆ ಎನ್ನುತ್ತಾರೆ ವೀಕ್ಷಕರೊಬ್ಬರು. 42 ಮಂದಿ ಪೊಲೀಸರು ಸೇರಿದಂತೆ ಒಟ್ಟು 130 ಮಂದಿ ಹಾಗೂ 2,000 ಆನೆಗಳು ವೀರಪ್ಪನ್ ಗುಂಡಿಗೆ ಬಲಿಯಾಗಿದ್ದವು.
ಆಂಬುಲೆನ್ಸ್ನಲ್ಲಿದ್ದ ಕಾಡುಗಳ್ಳ ವೀರಪ್ಪನ್ನನ್ನು ವಿಶೇಷ ಕಾರ್ಯಪಡೆ ಸುತ್ತುವರೆದು ಮಟ್ಟಹಾಕಿದ 'ಆಪರೇಷನ್ ಕಕೂನ್'ನ ಛಾಯಾಚಿತ್ರಗಳನ್ನು ವಸ್ತು ಪ್ರದರ್ಶನದಲ್ಲಿ ಇಡಲಾಗಿದೆ. ಇಲ್ಲಿನ ವಸ್ತು ಪ್ರದರ್ಶನ ನೋಡಿದರೆ,ವೀರಪ್ಪನ್ ಬಳಿ ಹೇಳಿಕೊಳ್ಳ್ಳುವಂತಹ ಅತ್ಯಾಧುನಿಕ ಆಯುಧಗಳಿಲ್ಲದಿದ್ದರೂ ಹೇಗೆ ಈತ ಇಷ್ಟು ವರ್ಷ ಸರ್ಕಾರಗಳನ್ನೇ ನಡುಗಿಸಿದ ಎಂಬುದುಬರಿ ಜನಸಾಮಾನ್ಯರನ್ನಷ್ಟೇ ಅಲ್ಲ ಪತ್ರಕರ್ತರನ್ನ್ನು ಚಕಿತಗೊಳಿಸುತ್ತಿದೆ.
(ಏಜೆನ್ಸೀಸ್)
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications