Get Updates
Get notified of breaking news, exclusive insights, and must-see stories!

ರಾಜ್ಯಸಭೆ ಸದಸ್ಯರಾಗಿ ಎಸ್.ಎಂ.ಕೃಷ್ಣ ಪ್ರಮಾಣ ವಚನ

ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ಸದಸ್ಯರಿಗೆ ಪಾರ್ಲಿಮೆಂಟ್ ಸಭಾಂಗಣದಲ್ಲಿ ಉಪ ರಾಷ್ಟ್ರಪತಿ ಹಾಗೂ ರಾಜ್ಯ ಸಭೆ ಅಧ್ಯಕ್ಷ ಹಮಿದ್ ಅನ್ಸಾರಿ ಪ್ರಮಾಣ ವಚನವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಳೆದ ವಾರವಷ್ಟೇ ಸಿ.ರಂಗರಾಜನ್(76) ಗಣ್ಯರ ಆರ್ಥಿಕ ಶಿಫಾರಸು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಹಾಗೆಯೇ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಸ್.ಎಂ.ಕೃಷ್ಣ (76) ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದು ಮೇಲ್ಮನೆಗೆ ಆಯ್ಕೆಯಾಗಿದ್ದರು.

ಗಾಂಧಿವಾದಿ ನಿರ್ಮಾಲಾ ದೇಶಾಪಾಂಡೆ ಅವರ ಹಠಾತ್ ಮರಣದಿಂದ ರಾಜ್ಯಸಭೆಯ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕಾಗಿ ರಂಗರಾಜನ್ ನಾಮಪತ್ರ ಸಲ್ಲಿಸಿದ್ದರು. ಹಲವಾರು ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರಕ್ಕೆ ರಂಗರಾಜನ್ ತಮ್ಮ ಅಮೂಲ್ಯ ಸಲಹೆಗಳನ್ನು ಕೊಟ್ಟಿದ್ದರು. ವಿಶೇಷ ವಿತ್ತ ವಲಯ, ಇಂಧನ ಬೆಲೆ, ಭವಿಷ್ಯದ ವಾಣಿಜ್ಯ ಮುಂತಾದ ವಿಷಯಗಳ ಕುರಿತು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಿದ್ದರು. ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮ ವಿಭೂಷಣ ಪ್ರಶಸ್ತಿಯನ್ನು ರಂಗರಾಜನ್ ಅವರಿಗೆ ಕೊಟ್ಟು ಗೌರವಿಸಲಾಗಿದೆ.

(ಏಜೆನ್ಸೀಸ್)
ರಾಜ್ಯಸಭೆಗಾಗಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ
ಮಹಾರಾಷ್ಟ್ಟ್ರಕ್ಕೆ ಎಸ್ ಎಂ ಕೃಷ್ಣ ಗುಡ್ ಬೈ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+