Get Updates
Get notified of breaking news, exclusive insights, and must-see stories!

ಖೇಲ್ ರತ್ನ, ಅರ್ಜುನ್ ಪ್ರಶಸ್ತಿ ಗಳಿಸಿದವರ ಪಟ್ಟಿ

ನವದೆಹಲಿ, ಆ. 19 : 2007 ನೇ ಸಾಲಿನ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ರಾಜೀವ್ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿಯನ್ನು ಪಡೆಯಲಿರುವ 12 ಜನ ಆಟಗಾರರ ಹೆಸರನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ ಪ್ರಕಟಿಸಿದೆ. ಕ್ರೀಡಾಪಟುಗಳ ಅತ್ಯುನ್ನತ ಪ್ರಶಸ್ತಿ ಎನ್ನಲಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಭಾರತೀಯ ಕ್ರಿಕೆಟ್ ನ ಒಂದು ದಿನದ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ ಪಡೆಯಲಿದ್ದಾರೆ. ಆ. 29 ರಾಷ್ಟ್ರಪತಿ ಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರಧಾನ ಮಾಡುವರು. ಕ್ರೀಡಾಪಟುಗಳ ಪಟ್ಟಿ ಇಂತಿದೆ.

2007ರ ಸಾಲಿನ ಅರ್ಜುನ್ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳು

ಅನೂಪ್ ಶ್ರೀಧರ್, ತುಂಬಿ ದೇವಿ, ಚಿತ್ರ ಕೆ. ಸುಮನ್, ಅವನೀತ್ ಕೌರ್ ಸಿಧು, ಭಜರಂಗಿಲಾಲ್ ಠಾಕೂರ್, ಬಾಕ್ಸರ್ ಜಾನ್ಸನ್ ವರ್ಗೀಸ್, ಕಿರಿಯರ ಚೆಸ್ ಚಾಂಪಿಯನ್ ಹರಿಕಾ ದ್ರೋಣವೆಲ್ಲಿ, ಹಾಕಿ ಆಟಗಾರ ಪ್ರಭೋಜಿತ್ ಸಿಂಗ್, ಗಾಲ್ಫ್ ಆಟಗಾರ ಅರ್ಜುನ್ ಅಟ್ವಾಲ್, ಕುಸ್ತಿ ಪಟು ಅಲ್ಕಾ ತೊಮರ್, ಪವರ್ ಲಿಫ್ಟರ್ ಫಾರ್ಮನ್ ಬಾಷಾ,

2008ರ ಸಾಲಿನ ಧ್ಯಾನಚಂದ್ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳು

ಅಥ್ಲೇಟಿಕ್ಸ್ ನ ಹಕಮ್ ಸಿಂಗ್, ಹಾಕಿ ಅಟಗಾರ್ತಿ ಮುಕಾಬೇನ್ ಸಿಂಗ್, ಕುಸ್ತಿ ಪಟು ಜಿಯಾನ್ ಸಿಂಗ್.

2007ರ ಸಾಲಿನ ದ್ರೋಣಚಾರ್ಯ ಪ್ರಶಸ್ತಿಗೆ ಆಯ್ಕೆಯಾದವರು

ಜ್ಯೋತಿರ್ಮಯಿ ಸಿಕ್ಧರ್, ಬಿಲ್ಲುಗಾರಿಕೆ ಆಟಗಾರ ಸಂಜೀವಕುಮಾರ ಸಿಂಗ್, ಬಾಕ್ಸಿಂಗ್ ಪಟು ಜಗದೀಶ್ ಸಿಂಗ್, ವಾಲಿಬಾಲ್ ನ ಜಿ.ಇ.ಶ್ರೀಧರನ್, ಕುಸ್ತಿ ಪಟು ಜಗಮಿಂದರ್ ಸಿಂಗ್.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+