ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಹೆಸರಿನ ಬಗ್ಗೆ ಸ್ಪಷ್ಟೀಕರಣ ಕೋರಿದ ಕೋರ್ಟ್

By Staff
|
Google Oneindia Kannada News

ಬೆಂಗಳೂರು,ಆ.19: ಆಂಗ್ಲಭಾಷೆಯಲ್ಲಿನ ಬೆಂಗಳೂರು ಹೆಸರನ್ನು 'Bengalooru"ಅಥವಾ 'Bengaluru"ಈ ಎರಡರಲ್ಲಿ ಯಾವ ಪದ ಬಳಸಬೇಕು ಎಂಬುದನ್ನು ಸೂಚಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈಗಿರುವ 'Bengalooru'ಗೆ ಬದಲಾಗಿ 'Bengaluru'ಎಂದು ಬಳಸುವಂತೆ ಕೋರಿ ಕೆ.ಎನ್.ಶ್ರೀನಿವಾಸ್ ಹಾಗೂ ಮತ್ತಿತರು ಕರ್ನಾಟಕ ಹೈಕೋರ್ಟ್‌‍ಗೆ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ನ್ಯಾಯಾಲಯ ಸರ್ಕಾರವನ್ನು ಕೋರಿದೆ. ಆಂಗ್ಲ ಭಾಷೆಯಲ್ಲಿ ಬಳಸುತ್ತಿರುವ Bengalooru ಪದ ಕನ್ನಡದ ಬೆಂಗಳೂರು ಪದಕ್ಕೆ ಸಮನಾಗಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಧ್ಯಮಗಳು ಹಾಗೂ ಸರ್ಕಾರಿ ಇಲಾಖೆಗಳು Bengaluru ಪದವನ್ನೇ ಬಳಸುತ್ತಿವೆ ಎಂದು ಅರ್ಜಿದಾರರು ನ್ಯಾಯಾಲಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದರು.

ಈ ಗೊಂದಲವನ್ನು ನಿವಾರಿಸಲು ಯಾವ ಪದ ಬಳಸಬೇಕೋ ಸೂಚಿಸಿ ಎಂದು ಹೈಕೋರ್ಟ್ ಸರ್ಕಾರವನ್ನು ಆದೇಶಿಸಿದೆ. 2007 ನವೆಂಬರ್ 1ರ ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಮೈಸೂರು,ಬೆಂಗಳೂರು,ಮಂಗಳೂರು ಮತ್ತಿತರ ನಗರಗಳ ಹೆಸರನ್ನು ಬದಲಾಯಿಸಲಾಗಿತ್ತು.

(ದಟ್ಸ್‌ಕನ್ನ್ನಡ ವಾರ್ತೆ)

ಬಿಐಎಎಲ್ ಮಾಹಿತಿ ಹಕ್ಕು ಕಾಯ್ದೆಗೆ ಬರಲಿದೆ : ಆಯೋಗ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X