Get Updates
Get notified of breaking news, exclusive insights, and must-see stories!

ಮುಷರಫ್ ರನ್ನು ಜೀವ ಸಹಿತ ಬಿಡೆವು :ಅಲ್ ಖೈದಾ

ಲಂಡನ್, ಆ. 19 : ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಯಲ್ಲಿ ಭಯೋತ್ಪಾದನೆಯ ದಮನದ ಹೆಸರಿನಲ್ಲಿ ನೂರಾರು ಅಮಾಯಕ ಜನರ ಪ್ರಾಣ ತೆಗೆದುಕೊಂಡಿದ್ದ ಸರ್ವಾಧಿಕಾರಿ ಮುಷರಫ್ ಸೋಮವಾರ ರಾಜೀನಾಮೆ ನೀಡಿರುವುದು ಅಲ್ ಖೈದಾ ಮತ್ತು ತಾಲಿಬಾನ್ ಉಗ್ರರಲ್ಲಿ ಹಬ್ಬ ವಾತಾವರಣ ಉಂಟು ಮಾಡಿದೆ. ಈ ಮಧ್ಯೆ ಲಾಲ್ ಮಸೀದಿ ಪ್ರಕರಣದಲ್ಲಿ ಅನೇಕ ಜನರ ಸಾವಿಗೆ ಕಾರಣರಾದ ಜನರಲ್ ಮುಷರಫ್ ಅವರನ್ನು ಕೊಲೆ ಮಾಡುವುದಾಗಿ ಮುಸ್ಲಿಂ ಮೂಲಭೂತವಾದಿಗಳು ಘೋಷಿಸಿದ್ದಾರೆ.

ಸೋಮವಾರ ಪಾಕ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವುದು ದೇಶದ ಬಹುಭಾಗದ ಜನರಿಗೆ ಸಂತಸ ಉಂಟು ಮಾಡಿದೆ. ಮುಷರಫ್ ರಾಜೀನಾಮೆ ನೀಡಿದ ಕೂಡಲೇ ಪಾಕ್ ಪ್ರಧಾನಮಂತ್ರಿ ಯೂಸೆಫ್ ರಜಾ ಗಿಲಾನಿ ಹಾಗೂ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಫ್ ತೀವ್ರ ಸಂತೋಷ ವ್ಯಕ್ತಪಡಿಸಿ, ಮುಷರಫ್ ರಾಜೀನಾಮೆ ದೇಶಕ್ಕೆ ಸಂದ ಜಯ, ಪ್ರಜಾಪ್ರಭುತ್ವಕ್ಕೆ ಸಿಕ್ಕಿ ವಿಜಯ ಎಂದು ಬಣ್ಣಿಸಿದ್ದರು. ಇದರ ಜತೆಗೆ ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಯಲ್ಲಿ ಅಲ್ಲಿಯ ಜನರು ಮುಷರಫ್ ಅಧಿಕಾರದಿಂದ ಕೆಳಗಿಳಿದ ವಿಷಯ ತಿಳಿಯುತ್ತಿದ್ದಂತೆಯೇ ಕುಣಿದು ಕುಪ್ಪಳಿಸಿದರು. ಕೇಕೆ ಹಾಕಿ ಬೀದಿ ತುಂಬೆಲ್ಲಾ ಸಹಿ ಹಂಚಿ ಪಟಾಕಿ ಸುಟ್ಟರು. ಇದಕ್ಕೆ ಕಾರಣವೆಂದರೆ ಜನರಲ್ ಮುಷರಫ್ ಭಯೋತ್ಪಾದನೆ ಹೆಸರಿನಲ್ಲಿ ಗಡಿ ಭಾಗದ ಅನೇಕ ಅಮಾಯಕರ ಸಾವಿಗೆ ಕಾರಣರಾಗಿದ್ದರು. ಅಮೆರಿಕದೊಂದಿಗೆ ಕೈಜೋಡಿಸಿ ಮುಸ್ಲಿಮರ ಮೇಲೆ ದಾಳಿ ನಡೆಸಿದ್ದರು.

ಇದರ ಜತೆಗೆ ನೂರಾರು ಮುಸ್ಲಿಂ ಕೊಲೆ ಮಾಡಿರುವ ಮುಷರಫ್ ಅವರನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಮೂಲಭೂತವಾದಿಗಳು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದೊಂದಿಗೆ ಸೇರಿಕೊಂಡು ಮುಸ್ಲಿಂ ರಾಷ್ಟ್ರಗಳಿಗೆ ಅನೇಕ ತೊಂದರೆಗಳನ್ನು ನೀಡಿದ್ದಾರೆ. ಹಾಗೂ ಲಾಲ್ ಮಸೀದಿಯಲ್ಲಿ ಅಡಗಿದ್ದ ಮೌಲ್ವಿಗಳನ್ನು ಸೈನಿಕ ನೆರವಿನ ಮೂಲಕ ಅವರನ್ನು ಹತ್ಯೆ ಮಾಡಿರುವುದು ಇಡೀ ಜನಾಂಗಕ್ಕೆ ನೋವಾಗಿದೆ. ಆದ್ದರಿಂದ ಅವರು ಎಲ್ಲೆ ಇದ್ದರೂ ಅವರನ್ನು ಜೀವಸಹಿತ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಲಂಡನ್ ನಲ್ಲಿ ಆಶ್ರಯ ಪಡೆಯಲಿರುವ ಮುಷರಫ್

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+