ಮಾಧ್ಯಮಗಳು ಬಿಂಬಿಸಿದಂತೆ ಅನೀಸ್ ಬಂಧನ ಸುಳ್ಳು

ಮುಂಬೈ, ಆ.13: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸೋದರ ಅನೀಸ್ ಇಬ್ರಾಹಿಂನನ್ನು ಜೆಡ್ಡಾ ಅಥವಾ ಮತ್ತಿನ್ಯಾವುದೇ ಸ್ಥಳದಲ್ಲಿ ಬಂಧಿಸಿಲ್ಲ ಎಂದು ರಕ್ಷಣಾ ಕಾರ್ಯಾಲಯ ಸ್ಪಷ್ಟಪಡಿಸಿದೆ.

ವಿದ್ಯುನ್ಮಾನ ಮಾಧ್ಯಮಗಳು ಮಂಗಳವಾರ ಅನೀಸ್ ಬಂಧನದ ಬಗ್ಗೆ ನಿರಂತರವಾಗಿ ಸುದ್ದಿ ಪ್ರಸಾರ ಮಾಡಿದವು. ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿರುವುದು ನಿಜ. ಆದರೆ ಬಂಧಿತರಲ್ಲಿ ದಾವೂದ್‌ನ ವರ್ಣರಂಜಿತ ಸೋದರ ಅನೀಸ್ ಸೇರಿಲ್ಲ ಎಂದು ಮುಂಬೈ ಜಂಟಿ ಪೊಲೀಸ್ ಆಯುಕ್ತ(ಅಪರಾಧ) ರಾಕೇಶ್ ಮಾರಿಯ ತಿಳಿಸಿದರು. ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ಪ್ರಕಾರ ಅನೀಸ್ ಪಾಕಿಸ್ತಾನದಲ್ಲಿ ಸುರಕ್ಷಿತವಾಗಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ.

ದಾವೂದ್ ಸಾಮ್ರಾಜ್ಯದ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿರುವ ಭೂಗತ ಜಗತ್ತಿನಲ್ಲಿ ಗುಟ್ಟಾಗಿ ಉಳಿದಿಲ್ಲ. ದಾವೂದ್‌ನ ಬಲಗೈ ಬಂಟರಾದ ಚೋಟಾ ಶಕೀಲ್ ಹಾಗೂ ಟೈಗರ್ ಮೆಮೊನ್‌ರನ್ನು ಪಾಕಿಸ್ತಾನದ ಐಎಸ್‌ಐ ನಿಯಂತ್ರಿಸುತ್ತಿದೆ. ದಾವೂದ್‌ನ ಮತ್ತೊಬ್ಬ ಸೋದರ ಇಕ್ಬಾಲ್ ಮುಂಬೈ ಪೊಲೀಸರಿಗೆ ಶರಣಾದ ಬಳಿಕ ಅನೀಸ್ ಇಬ್ರಾಹಿಂ ಮಾದಕ ವಸ್ತುಗಳ ಕಳ್ಳಸಾಗಣೆ ಹಾಗೂ ಡಿ-ಗುಂಪಿನ ಹಲವಾರು ಕಾನೂನು ಬಾಹಿರ ಚಟುವಟಿಕೆಗಳನ್ನು ನಿಭಾಯಿಸುತ್ತಿರುವುದಾಗಿ ಪೊಲೀಸ್ ದಾಖಲೆಗಳು ಹೇಳುತ್ತವೆ.

(ಏಜೆನ್ಸೀಸ್)

ಸೌದಿಯಲ್ಲಿ ದಾವೂದ್ ಇಬ್ರಾಹಿಂ ಸೋದರನ ಬಂಧನ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+