ಬೀಜಿಂಗ್ ಒಲಿಂಪಿಕ್ಸ್: ಕ್ವಾರ್ಟರ್ ಪೈನಲ್ ಗೆ ಸೈನಾ

saina nehwalಬೀಜಿಂಗ್, ಆ. 11 : 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನದ ಪದಕ ಪಡೆದುಕೊಂಡಿರುವ ಬೆನ್ನಲ್ಲೇ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.ವಿಶ್ವದ ಐದನೇ ಕ್ರಮಾಂಕದ ಆಟಗಾರ್ತಿ ಹಾಂಕಾಂಗ್ ನ ಚೆನ್ ವಾಂಗ್ ಅವರನ್ನು 21-19, 11-21 ಮತ್ತು 21-11 ಸೆಟ್ ಗಳ ಮೂಲಕ ಸೋಲಿಸಿ ಕ್ವಾರ್ಟರ್ ಫೈನಲ್ ತಲುಪುವುದರೊಂದಿಗೆ ಭಾರತದ ಇನ್ನೊಂದು ಪದಕ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ಮೊದಲ ಸೆಟ್ ನಲ್ಲಿ ಇಬ್ಬರು ಆಟಗಾರ್ತಿಯರು ಪ್ರತಿ ಹಂತದಲ್ಲಿ ಅಂಕಗಳಿಗಾಗಿ ತೀವ್ರ ಪೈಪೋಟಿ ನಡೆಸಿದರು. ಆದರೆ ಎರಡು ಸೆಟ್ ನಲ್ಲಿ ಸೈನಾ ಹಾಂಕಾಂಗ್ ನ ಚೆನ್ ವಾಂಗ್ ಅವರ ಪ್ರಖರ ಆಟದ ಮುಂದೆ ಸಂಪೂರ್ಣವಾಗಿ ಕುಸಿದವರಂತೆ ಕಂಡು ಬಂದರು. ಅವರ ಬಲವಾದ ಹೊಡೆತಗಳಿಗೆ ಸೂಕ್ತ ಉತ್ತರ ನೀಡುವಲ್ಲಿ ವಿಫಲರಾದರು. ಈ ಹಂತದಲ್ಲಿ ಸೈನಾ ಆಟ ಭಾರತೀಯ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತ್ತು.

ಮೂರನೇ ಸೆಟ್ ನಲ್ಲಿ ಪುಟಿದೆದ್ದ ಸೈನಾ ಹಾಂಕಾಂಗ್ ಆಟಗಾರ್ತಿ ಮೇಲೆ ದಾಳಿ ನಡೆಸುವ ಮೂಲಕ ಹಿಡಿತ ಸಾಧಿಸಿದರು. ಇದರ ಜತೆಗೆ ಎರಡನೇ ಸೆಟ್ ನಲ್ಲಿ ಅನುಭವಿಸಿದ್ದ ಸೋಲಿನ ಸೇಡನ್ನು ತೀರಿಸಿಕೊಳ್ಳುವಲ್ಲಿ ಸೈನಾ ಸಫಲರಾಗಿ ಕ್ವಾರ್ಟರ್ ಫೈನಲ್ ತಲುಪಿದರು. ಭಾನುವಾರ ಸೈನಾ ರಷ್ಯಾದ ಆಟಗಾರ್ತಿ ಲಾರಿಶಾ ಗ್ರಿಜಾ ಅವರನ್ನು ಪ್ರಿ-ಕ್ವಾರ್ಟರ್ ಫನಲ್ ಸೋಲಿಸಿದ್ದರು.

(ದಟ್ಸ್ ಕನ್ನಡ ಕ್ರೀಡಾ ವಾರ್ತೆ)

ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+