ಟೆನ್ನಿಸ್ ಪ್ರಿಯರಿಗೆ ಭಾರಿ ನಿರಾಸೆ ಮೂಡಿಸಿದ ಸಾನಿಯಾ

ಬೀಜಿಂಗ್, ಆ.11 : ಅಭಿನವ್ ಬಿಂದ್ರಾ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿರುವ ಬೆನ್ನಲ್ಲೇ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಪ್ರಥಮ ಸುತ್ತಿನಲ್ಲಿಯೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಮೂಲಕ ಭಾರತೀಯ ಟೆನ್ನಿಸ್ ಪ್ರಿಯರಲ್ಲಿ ಭಾರಿ ನಿರಾಶೆ ಮೂಡಿಸಿದ್ದಾರೆ.

ಸಾನಿಯಾ ಮಿರ್ಜಾ ಅವರ ಮೇಲೂ ಭಾರಿ ಭರವಸೆಯನ್ನು ಇಡಲಾಗಿತ್ತು. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಆಟಗಾರ್ತಿಯಲ್ಲಿ ಅವರೂ ಒಬ್ಬರು ಎಂದು ಬಿಂಬಿಸಲಾಗಿತ್ತು. ಚೆಕ್ ಗಣರಾಜ್ಯದ ಇವೇಟಾ ವೆನೆಸೋವಾ ವಿರುದ್ಧ ಮಹಿಳಾ ಸಿಂಗಲ್ಸ್ ನ ಪ್ರಥಮ ಸುತ್ತಿನಲ್ಲಿ 1-6, 1-2 ಸೆಟ್ ಗಳಲ್ಲಿ ಆಟ ಆಡುತ್ತಿರುವ ಸಂದರ್ಭದಲ್ಲಿ ತೀವ್ರವಾಗಿ ಉಲ್ಭಣಿಸಿದ ಗಾಯದಿಂದ ಸಾನಿಯಾ ಹೊರಗುಳಿಯಲು ನಿರ್ಧರಿಸಿದರು. ಇದರೊಂದಿಗೆ ಅವರು ಡಬಲ್ಸ್ ನಲ್ಲಿ ಆಡುವುದು ಕೂಡಾ ಅನುಮಾನವಾಗಿದೆ.

ಕಳೆದ ವಾರ ಸ್ಟಾಕ್ ಹೋಂ ನಲ್ಲಿ ನಡೆದ ಪಂದ್ಯದಲ್ಲಿ ಅವರಿಗೆ ಗಾಯದ ಸಮಸ್ಯೆ ಎದುರಾಗಿತ್ತು. ಭಾರತದ ಎರಡನೇ ಕ್ರಮಾಂಕದ ಆಟಗಾರ್ತಿ ಸುನೀತಾ ರಾವ್ ಹಾಗೂ ಸಾನಿಯಾ ಮಿರ್ಜಾ ಅವರು ಫೆಡರೇಷನ್ ಕಪ್‌ನಲ್ಲಿ ಡಬಲ್ಸ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಒಲಿಂಪಿಕ್ಸ್ ನಲ್ಲಿ ಟೆನ್ನಿಸ್ ಹಸಿರು ಅಂಕಣದಲ್ಲಿ ನೂತನ ಕರಾಮತ್ತು ತೋರಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಗಾಯ ಸಮಸ್ಯೆಯಿಂದ ಬಳಲುತ್ತಿರುವ ಅವರು ಪಂದ್ಯದಿಂದ ನಿವೃತ್ತಿಯಾಗಿರುವುದು ಟೆನ್ನಿಸ್ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಅನೂಪ್ ಹೊರಕ್ಕೆ: ಕರ್ನಾಟಕದ ಬಾಡ್ಮಿಂಟನ್ ಪಟು ಅನೂಪ್ ಶ್ರೀಧರ್ ಕೂಡ ಒಲಿಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ. 2 ನೇ ಸುತ್ತಿನಲ್ಲಿ ಜಪಾನಿನ ಪ್ರತಿಸ್ಪರ್ಧಿ ಸೋಜಿ ಸಾಟೋ ವಿರುದ್ಧ ಸೋಲುಂಡಿದ್ದಾರೆ.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

ಒಲಿಂಪಿಕ್ಸ್ : ಭಾರತದ ಅಭಿನವ್ ಬಿಂದ್ರಾಗೆ ಬಂಗಾರ
ಬೀಜಿಂಗ್ ಒಲಿಂಪಿಕ್ಸ್: ಕ್ವಾರ್ಟರ್ ಪೈನಲ್ ಗೆ ಸೈನಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+