ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನಕ್ಕೆ ಯಡಿಯೂರಪ್ಪ ಉಪಸ್ಥಿತಿ

By Staff
|
Google Oneindia Kannada News

ಹಾಸನ, ಆ. 10 : ಅಮೆರಿಕದ ಚಿಕಾಗೋದಲ್ಲಿ ಅನಿವಾಸಿ ಕನ್ನಡಿಗರು ಹಮ್ಮಿಕೊಂಡಿರುವ ವಿಶ್ವಕನ್ನಡ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೆರಳವುದನ್ನು ಖಚಿತಪಡಿಸಿದ್ದಾರೆ.

ಹಾಸನ ತಾಲ್ಲೂಕಿನ ಬನವಾಸೆ ಗ್ರಾಮದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಿಮಾತ್ಯ ರಾಷ್ಟ್ರಗಳ ಅಭಿವೃದ್ಧಿಯ ಮುಂಚೂಣೆಯಲ್ಲಿರುವವರು ಭಾರತೀಯರು. ನಮ್ಮ ತಂತ್ರಜ್ಞರು ಅಪಾರ ಬುದ್ಧಿಶಾಲಿಗಳು, ಅಂಥ ಬೌದ್ಧಿಕ ಶಕ್ತಿ ಹೊಂದಿದ ನಾವುಗಳು ಏಕೆ ಸಂಕಷ್ಟಕ್ಕೆ ಸಿಲುಕಿದ್ದೇವೆ. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದುಕೊಂಡಿರುವೆ ಎಂದರು. ಪ್ರತಿಭಾವಂತರು ಭಾರತಕ್ಕೆ ವಾಪಸ್ಸು ಬಂದು ತಮ್ಮ ಪ್ರತಿಭೆಯನ್ನು ತೋರಿಸಿ ಈ ದೇಶವನ್ನು ಪಾಶ್ಚಾತ್ಯ ರಾಷ್ಟ್ರಗಳ ಮಟ್ಟಕ್ಕೆ ಅಭಿವೃದ್ಧಿಪಡಿಸಿ ಎಂದು ನಿವೇದಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಪಕ್ಷಿಗಳು ಆಕಾಶದಲ್ಲಿ ಹಾರಾಡಿದರೂ ಆಹಾರಕ್ಕಾಗಿ ಭೂಮಿಗೆ ಬರಲೇಬೇಕು. ಹಾಗೆಯೇ ಮನುಷ್ಯ ಎಷ್ಟೇ ಸಾಧನೆ ಮಾಡಿದರೂ ಧರ್ಮ, ದೇವರುಗಳ ಮೊರೆ ಹೋಗಿ ಮಾನಸಿಕ ಶಾಂತಿ ಪಡೆಯಬೇಕಾಗಿದೆ ಎಂದ ಅವರು, ಇತ್ತೀಚೆಗೆ ದಿನಗಳಲ್ಲಿ ಗ್ರಾಮೀಣ ಭಾಗದ ಜನರ ಸ್ಥಿತಿ ಹದಗೆಡುತ್ತಿದೆ. ಅಲ್ಪಸ್ವಲ್ಪ ಶಿಕ್ಷಣ ಪಡೆದವರು ತಕ್ಷಣವೇ ಗ್ರಾಮಗಳನ್ನು ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದು, ಪರಿಣಾಮವಾಗಿ ಹಳ್ಳಿಗಳು ಇಂದು ಖಾಲಿಯಾಗಿ ವೃದ್ಧಾಶ್ರಮಗಳಾಗ ತೊಡಗಿವೆ ಎಂದು ವಿಷಾಧದಿಂದ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಅಕ್ಕ ಸಮ್ಮೇಳನ : ನೊಂದಾವಣಿ ಶುಲ್ಕದಲ್ಲಿ ಕಡಿತ
ಅಕ್ಕ ಸಮ್ಮೇಳನಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ದಂಡು
'ಅಕ್ಕ' ಸಮ್ಮೇಳನ : ಓಬಾಮಾ ನೋ, ಬಿಎಸ್‌ವೈ ಎಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X