ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ ಕಾಂಗ್ರೆಸ್ ಅಂಗಳದಲ್ಲಿ ಅಣು ಬಂಧ

By Staff
|
Google Oneindia Kannada News

ವಾಷಿಂಗ್ ಟನ್, ಆ. 5 : ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ತನ್ನ ಸುರಕ್ಷತಾ ಒಪ್ಪಂದಗಳಿಗೆ ಅಂತಾರಾಷ್ಟ್ರೀಯ ಅಣು ಶಕ್ತಿ ಆಯೋಗದಿಂದ ಹಸಿರು ನಿಶಾನೆ ಪಡೆದಿರುವ ಬೆನ್ನಲ್ಲೇ ಅಮೆರಿಕ ಸರ್ಕಾರ ಸೆಪ್ಟಂಬರ್ 8 ರಂದು ಅಮೆರಿಕನ್ ಕಾಂಗ್ರೆಸ್ ಮುಂದೆ ಈ ವಿಷಯವನ್ನು ಮಂಡಿಸಲಿದೆ. ಏಷ್ಯಾದಲ್ಲಿ ಶಕ್ತಿಯುತ ರಾಷ್ಟ್ರ ಎನ್ನಲಾದ ಭಾರತದೊಂದಿಗಿನ ಅಣು ಒಪ್ಪಂದಕ್ಕೆ ಅಮೆರಿಕನ್ ಕಾಂಗ್ರೆಸ್ ಕೂಡಾ ಸಹಮತ ಸೂಚಿಸಲಿದೆ ಎಂದು ಬುಷ್ ಅಡಳಿತದ ಮೂಲಗಳು ತಿಳಿಸಿವೆ.

ಆ. 21 ರಂದು ಅಣು ಸರಬರಾಜು ರಾಷ್ಟ್ರಗಳು(ಎನ್ ಎಸ್ ಜಿ) ಸಭೆ ಸೇರಲಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕದ ಆಡಿಳಿತ ಯಂತ್ರವು ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳ ಮೇಲೆ ಭಾರಿ ಒತ್ತಡ ತಂದಿದೆ. ಇನ್ನೊಂದಡೆ ಭಾರತ ಕೂಡಾ ಲಾಬಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಎನ್ ಎಸ್ ಜಿ ಸದಸ್ಯ ರಾಷ್ಟ್ರವಾದ ಜಪಾನ್ ಮನವೂಲಿಸಲು ಅನೇಕ ಪ್ರಯತ್ನಗಳು ನಡೆಸಿದೆ. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಜಪಾನ್ ವಿದೇಶಾಂಗ ಸಚಿವ ಮಾಸಿಕೋ ಕೈಮಾರ್ ಅವರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದ್ದಾರೆ. ಉಭಯ ರಾಷ್ಟ್ರಗಳ ಬಾಂಧವ್ಯ ಸುಧಾರಣೆ ಕುರಿತು ಮಹತ್ವದ ಮಾತುಕತೆಯನ್ನು ನಡೆಸಿದ್ದಾರೆ.

ಸುರಕ್ಷತಾ ದೃಷ್ಟಿಯಿಂದ ಭಾರತ ಮತ್ತು ಅಮೆರಿಕಕ್ಕೆ ಅಣು ಒಪ್ಪಂದ ಮಹತ್ವದ್ದಾಗಿದೆ. ಈ ಮೂಲಕ ಉಭಯ ರಾಷ್ಟ್ರಗಳ ಬೆಳವಣಿಗೆ ಸಾಧ್ಯ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ. ಸೆಪ್ಟಂಬರ್ ತಿಂಗಳ ಅಂತ್ಯದೊಳಗೆ ಭಾರತ ಅಣು ಶಕ್ತಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಮೂಲಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

ಅಣು ಒಪ್ಪಂದಕ್ಕೆ ಅಧಿಕೃತ ಮುದ್ರೆ ಖಂಡಿತ: ಪ್ರಣಬ್
ಅಣು ಒಪ್ಪಂದ ಜಪಾನ್ ಮನವೊಲಿಕೆಯತ್ತ ಪ್ರಣಬ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X