ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೋಟದ ಹಿನ್ನಲೆಯಲ್ಲಿ ಸಂಜೆ ತುರ್ತು ಸಂಪುಟ ಸಭೆ

By Staff
|
Google Oneindia Kannada News

ಬೆಂಗಳೂರು, ಜು. 25 : ನಗರದಲ್ಲಿ ನಡೆದ ಸ್ಫೋಟ ಕೃತ್ಯದ ಹಿನ್ನಲೆಯಲ್ಲಿ ಇಂದು 4.30ಕ್ಕೆ ಸಂಪುಟ ತುರ್ತು ಸಂಪುಟ ಸಭೆಯನ್ನು ಕರೆಯಲಾಗಿದೆ. ಸ್ಫೋಟಹಿಂದಿನ ರಹಸ್ಯವನ್ನು ಶೀಘ್ರದಲ್ಲಿ ಬೇಧಿಸುತ್ತೇವೆ ಎಂದು ಸರ್ಕಾರ ಮೂಲಗಳು ತಿಳಿಸಿವೆ.

ಘಟನೆ ಹಿನ್ನಲೆಯಲ್ಲಿ ತುರ್ತು ಸಂಪುಟ ಸಭೆ

ನಗರದಲ್ಲಿ ಏಳು ಸ್ಪೋಟಗೊಂಡಿರುವ ಘಟನೆಯನ್ನು ತೀವ್ರವಾಗಿ ಖಂಡಿನೀಯ ಎಂದು ಅಬಕಾರಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು. ಘಟನಾ ಸ್ಥಳಕ್ಕೆ ಭೇಟಿ ನಂತರ ಮಾತನಾಡುತ್ತಿದ್ದ ಅವರು, ಬೆಂಗಳೂರಿನ ಶಾಂತಿಯನ್ನು ಕದಡಲು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು. ಆರೋಪಿಗಳ ಬಂಧನಕ್ಕೆ ಈಗಾಗಲೇ ಆದೇಶಿಸಲಾಗಿದೆ. ಸಂಜೆಯೊಳಗೆ ಪ್ರಾಥಮಿಕ ವರದಿಯನ್ನು ಸರ್ಕಾರ ಅಧಿಕೃತವಾಗಿ ನೀಡಲಿದೆ ಎಂದು ಅವರು ಹೇಳಿದರು.

ಮಡಿವಾಳ ಚೆಕ್ ಪೋಸ್ಟ್ ಬಳಿ ಸ್ಫೋಟದ ಹಿನ್ನಲೆಯಲ್ಲಿ ಮೃತಪಟ್ಟಿರುವ ಲಕ್ಷ್ಮಿ ಎನ್ನುವ ಮಹಿಳೆಯ ಕುಟುಂಬಕ್ಕೆ 1 ಲಕ್ಷ ರುಪಾಯಿಗಳ ಪರಿಹಾರವನ್ನು ಘೋಷಣೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ತಪ್ಪಿತಸ್ಥರನ್ನು ಕೂಡಲೇ ಬಂಧಿಸುತ್ತೇವೆ ಎಂದು ಹೇಳಿದ ಅವರು ಘಟನೆಯಲ್ಲಿ ಗಾಯಗೊಂಡು ನಗರದ ವಿವಿಧ ಆಸ್ಪತ್ರೆಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದರು. ಗಾಯಾಳುಗಳನ್ನು ಸೆಂಟ್ ಜಾನ್ ಆಸ್ಪತ್ರೆ, ಮಲ್ಯ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ

ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ನಡೆದ ಭಯೋತ್ಪಾದನೆ ಕೃತ್ಯಗಳಿಗೂ ಇಂದು ಬೆಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಸಂಬಂಧವಿದೆಯಾ ? ಹೌದು ಎನ್ನುತ್ತವೆ ಮೂಲಗಳು. ಈ ಎರಡು ನಗರಗಳಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿದೆ. ಅಲ್ಲದೇ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿರುವ ವ್ಯಕ್ತಿಗಳಿಗೂ ಸಿಮಿ ಸಂಘಟನೆ ಜತೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟಗಳಂತೆಯೇ ಬೆಂಗಳೂರಿನ ಸ್ಪೋಟ ನಡೆದಿದೆ ಎನ್ನಲಾಗಿದೆ.

ಇಂದು ನಡೆದ ಸ್ಪೋಟ ಪ್ರಕರಣದಲ್ಲಿ ಸಿಮಿ ಸಂಘಟನೆ ಮತ್ತು ಲಷ್ಕರ್-ತೊಯ್ಬಾ ಸಂಘಟನೆಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸುಮಾರು 1.20 ರಿಂದ 2.35 ರ ಒಳಗೆ ನಗರದ ವಿವಿಧ ಏಳು ಸ್ಫೋಟಗೊಂಡಿವೆ, ಮೊಬೈಲ್ ಫೋನ್ ಗಳು ಮತ್ತು ಸುಧಾರಿತ ಟೈಮರ್ ಉಪಕರಣವನ್ನು ಸ್ಫೋಟಕ್ಕೆ ಬಳಸಲಾಗಿದೆ. ಕೆಲ ಸ್ಫೋಟಗಳನ್ನು ಸಿಮೆಂಟ್ ತುಂಡುಗಳು, ಜೆಲೆಟಿನ್ ಕಡ್ಡಿಗಳು, ಟೈಮರ್ ಗೆ ಬಳಸುವ ಸಾಧನಗಳು ಘಟನಾ ಸ್ಥಳದಲ್ಲಿ ದೊರಕಿವೆ.

ಈ ಸ್ಫೋಟಕ್ಕೆ ಉತ್ತಮ ತಯಾರಿ ನಡೆಸಲಾಗಿದೆ ಎನ್ನಲಾಗಿದೆ. ಅನೇಕ ದಿನಗಳ ಪೂರ್ವ ತಯಾರಿ ನಡೆಸಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳಕ್ಕೆ ತಜ್ಞರ ತಂಡದ ಪರಿಶೀಲನೆ ಮುಂದುವರೆದಿದೆ.

(ದಟ್ಸ್ ಕನ್ನಡ ವಾರ್ತೆ)

ಸ್ಪೋಟಗಳ ಹಿಂದೆ ಭಯೋತ್ಪಾದಕರ ಕೈವಾಡ :ಬಿದರಿ
ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X