ಏಷ್ಯಕಪ್-2008 ಕ್ರಿಕೆಟ್ ಸಮರದ ವೇಳಾಪಟ್ಟಿ
ಕರಾಚಿ, ಜೂ.24: ಮತ್ತೊಂದು ಕ್ರಿಕೆಟ್ ಸಮರ ಏಷ್ಯಕಪ್-2008 ಇಂದಿನಿಂದ (ಜೂ.24) ಆರಂಭವಾಗಿದೆ. ಏಷ್ಯಾದ ಮೂರು ಬಲಿಷ್ಠ ರಾಷ್ಟ್ರಗಳೊಂದಿಗೆ ಇನ್ನುಳಿದ ಮೂರು ತಂಡಗಳು ಪ್ರತಿಷ್ಠಿತ ಏಷ್ಯಕಪ್‌ಗಾಗಿ ಸೆಣೆಸಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ ಭಾರಿ ಪೈಪೋಟಿ ನಡೆಸಲು ಸಿದ್ಧವಾಗಿದ್ದರೆ, ಇನ್ನುಳಿದ ತಂಡಗಳಾದ ಯುಎಇ, ಬಾಂಗ್ಲಾ ಹಾಗೂ ಹಾಂಕಾಂಗ್ ದೊಡ್ಡ ತಂಡಗಳೊಂದಿಗೆ ಅಭ್ಯಾಸ, ಅನುಭವ ಪಡೆಯಲು ಟೂರ್ನಿಯನ್ನು ಬಳಸಿಕೊಳ್ಳಲಿವೆ. ಇದೆಲ್ಲದರ ನಡುವೆ ಬಾಂಗ್ಲಾ ಅಚ್ಚರಿಯ ಫಲಿತಾಂಶ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಗ್ರೂಪ್ 'ಎ'ನಲ್ಲಿ ಬಾಂಗ್ಲಾ, ಯುಎಇ ಹಾಗೂ ಶ್ರೀಲಂಕಾ ತಂಡಗಳಿದ್ದರೆ ಗ್ರೂಪ್ 'ಬಿ'ಯಲ್ಲಿ ಪಾಕಿಸ್ತಾನ, ಹಾಂಕಾಂಗ್ ಹಾಗೂ ಭಾರತ ತಂಡಳಿವೆ.
| ಏಷ್ಯಕಪ್-2008 ವೇಳಾಪಟ್ಟಿ | ||||
|---|---|---|---|---|
| ದಿನಾಂಕ | ಸಮಯ | ರಾಷ್ಟ್ರಗಳು | ಸ್ಥಳ | ಫಲಿತಾಂಶ |
| 24-06-08 (ಮಂಗಳವಾರ) | 15:30 | 1ನೇ ಪಂದ್ಯ,ಗ್ರೂಪ್ ಎ
ಬಾಂಗ್ಲಾದೇಶ Vs ಯುಎಇ | ಲಾಹೋರ್ | ಬಾಂಗ್ಲಾಗೆ 98 ರನ್‌ಗಳ ಜಯ |
| 24-06-08 (ಮಂಗಳವಾರ) | 16:30 | 1ನೇ ಪಂದ್ಯ,ಗ್ರೂಪ್ ಬಿ
ಪಾಕಿಸ್ತಾನ್ Vs ಹಾಂಕಾಂಗ್ | ಕರಾಚಿ | ಪಾಕಿಸ್ತಾನ್‌ಗೆ 115 ರನ್‌ಗಳ ಜಯ |
| 25-06-08 (ಬುಧವಾರ) | 15:30 | 2ನೇ ಪಂದ್ಯ, ಗ್ರೂಪ್ ಎ
ಬಾಂಗ್ಲಾದೇಶ Vs ಶ್ರೀಲಂಕಾ | ಲಾಹೋರ್ | ಶ್ರೀಲಂಕಾಗೆ 131 ರನ್‌ಗಳ ಜಯ |
| 25-06-08 (ಬುಧವಾರ) | 16:30 | 2ನೇ ಪಂದ್ಯ, ಗ್ರೂಪ್ ಬಿ
ಹಾಂಕಾಂಗ್ Vs ಭಾರತ | ಕರಾಚಿ | ಭಾರತಕ್ಕೆ 256 ರನ್‌ಗಳ ಜಯ |
| 26-06-08 (ಗುರುವಾರ) | 15:30 | 3ನೇ ಪಂದ್ಯ, ಗ್ರೂಪ್ ಎ
ಶ್ರೀಲಂಕಾ Vs ಯುಎಇ | ಲಾಹೋರ್ | ಶ್ರೀಲಂಕಾಗೆ 142 ರನ್‌ಗಳ ಜಯ |
| 26-06-08 (ಗುರುವಾರ) | 16:30 | 3ನೇ ಪಂದ್ಯ, ಗ್ರೂಪ್ ಬಿ
ಭಾರತ Vs ಪಾಕಿಸ್ತಾನ | ಕರಾಚಿ | ಭಾರತಕ್ಕೆ 6 ವಿಕೆಟ್‌ಗಳ ಜಯ |
| ಸೂಪರ್ ಲೀಗ್ ಹಂತ | ||||
| 28-06-08 (ಶನಿವಾರ) | 16:30 | ಎ2 Vs ಬಿ2 | ಕರಾಚಿ | ಭಾರತಕ್ಕೆ 7 ವಿಕೆಟ್‌ಗಳ ಜಯ |
| 29-06-08(ಭಾನುವಾರ) | 16:30 | ಎ1 Vs ಬಿ1 | ಕರಾಚಿ | ಶ್ರೀಲಂಕಾಗೆ 64 ರನ್‌ಗಳ ಜಯ |
| 30-06-08 (ಸೋಮವಾರ) | 16:30 | ಎ1 Vs ಎ2 | ಕರಾಚಿ | ಶ್ರೀಲಂಕಾಗೆ 158 ರನ್‌ಗಳ ಜಯ |
| 02-07-08 (ಬುಧವಾರ) | 16:30 | ಬಿ1 Vs ಬಿ2 | ಕರಾಚಿ | ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ |
| 03-07-08 (ಗುರುವಾರ) | 16:30 | ಎ1 Vs ಬಿ2 | ಕರಾಚಿ | |
| 04-07-08 (ಶುಕ್ರವಾರ) | 16:30 | ಎ2 Vs ಬಿ1 | ಕರಾಚಿ | |
| ಫೈನಲ್ ಪಂದ್ಯ | ||||
| 06-07-08 (ಭಾನುವಾರ) | 16:30 | ಫೈನಲ್ | ಕರಾಚಿ | |












Click it and Unblock the Notifications