ಮರು ಮತದಾನಕ್ಕೆ ಮತದಾರರ ನಿರಾಸಕ್ತಿ

ಬೆಂಗಳೂರು,ಮೇ 12: ತಾಂತ್ರಿಕ ದೋಷದಿಂದಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳು ಕೈಕೊಟ್ಟ ಕಾರಣ ನಾಲ್ಕು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯುತ್ತಿದೆ. ಸೋಮವಾರ ಕಚೇರಿಗಳಿಗೆ ರಜೆ ಇಲ್ಲ. ಬೆಂಗಳೂರಿನ ಜನತೆ ಮತ್ತೆ ಸಾಲಿನಲ್ಲಿ ನಿಂತು ಮತಹಾಕಲು ನಿರಾಸಕ್ತಿ ತೋರಿಸುತ್ತಿದ್ದಾರೆ. ಪರಿಣಾಮ ಮತದಾನದ ಪ್ರಮಾಣ ಕುಸಿಯಲಿದೆ.

ಚುನಾವಣೆ ಕಾರ್ಯದಿಂದ ಸುಸ್ತಾಗಿದ್ದ ರಾಜಕೀಯ ನಾಯಕರು ಸೋಮವಾರ ಮರು ಮತದಾನದ ಕಾರಣ ಭಾನುವಾರ ಹೆಚ್ಚುವರಿ ಕೆಲಸ ಮಾಡಬೇಕಾಯಿತು. ಶನಿವಾರ ಮಲ್ಲೇಶ್ವರದ ಮತಗಟ್ಟೆಯಲ್ಲಿ ಶೇ. 64ರಷ್ಟು ಮತದಾನ ನಡೆದಿತ್ತು.ಈಗ ಮರು ಮತದಾನದ ಕಾರಣ ಈ ಪ್ರಮಾಣದಲ್ಲಿ ಕುಸಿತ ಉಂಟಾಗುವ ಸಾಧ್ಯತೆಗಳಿವೆ.

ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದು ಮರು ಮತದಾನ ನಡೆಸಲಾಗುತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಂ.ಎನ್.ವಿದ್ಯಾಶಂಕರ್ ಹೇಳಿದರು. ಮರುಮತದಾನದ ಬಗ್ಗೆ ಸಾರ್ವಜನಿಕರಿಗೆ ಆಟೋ ಹಾಗೂ ಮೈಕ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮರು ಮತದಾನ ಎಲ್ಲಿ?
ರಾಮನಗರ ವಿಧಾನಸಭೆ ಮತಗಟ್ಟೆ ಸಂಖ್ಯೆ 46, ಬೆಂಗಳೂರಿನ ಮಲ್ಲೇಶ್ವರಂ ಮತಗಟ್ಟೆ ಸಂಖ್ಯೆ 6ಎ(ಜೀವನ ಜ್ಯೋತಿ ಶಾಲೆಯ ಮತಗಟ್ಟೆ), ಶಿವಾಜಿನಗರ ಮತಕ್ಷೇತ್ರದ 119ಎ(ಆರ್ ಬಿಎಎನ್ಎಂಎಸ್ ಪ್ರಥಮ ಕಾಲೇಜು, ಅಣ್ಣಾಸ್ವಾಮಿ ಮೊದಲಿಯಾರ್ ರಸ್ತೆ) ಹಾಗೂಗಾಂಧಿನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 50(ಸೇವಾಶ್ರಮ ಶಾಲೆ, 5ನೇ ಮುಖ್ಯ ರಸ್ತೆ).

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+