ಪ್ರಸಕ್ತ ವಿಧಾನಸಭಾ ಚುನಾವಣೆಯ ನಾಡಿ ಪರೀಕ್ಷೆ
ಬೆಂಗಳೂರು, ಮೇ. 9 : ಹದಿಮೂರನೇ ಕರ್ನಾಟಕ ವಿಧಾನಸಭಾ ಚುನಾವಣೆಯ ದಟ್ಸ್ ಕನ್ನಡ ಇಲೆಕ್ಟ್ರಾನಿಕ್ ಮತಗಟ್ಟೆಗೆ ಸ್ವಾಗತ. ರಾಜ್ಯದಲ್ಲಿ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು ಮೊದಲ ಹಂತದ ಮತದಾನ ಮೇ 10 ಶನಿವಾರ ನಡೆಯಲಿದೆ. ದಕ್ಷಿಣ ಕರ್ನಾಟಕದ ಒಟ್ಟು 11 ಜಿಲ್ಲೆಗಳನ್ನು ಒಳಗೊಳ್ಳುವ ಮತದಾನದಲ್ಲಿ 89 ವಿಧಾನಸಭಾ ಕ್ಷೇತ್ರಗಳು ಇರುತ್ತವೆ. ಒಂದು ಕೋಟಿ ಎಪ್ಪತ್ತಾರು ಲಕ್ಷ ಮತದಾರರಿದ್ದಾರೆ. ಕಣದಲ್ಲಿರುವ ಹುರಿಯಾಳುಗಳ ಸಂಖ್ಯೆ 953.
ಜಿಲ್ಲೆಗಳ ಹೆಸರು : ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ತುಮಕೂರು.
ದಟ್ಸ್‌ಕನ್ನಡ ಓದುಗರು ಜನಾಭಿಪ್ರಾಯ ಸಂಗ್ರಹಣೆಯ ಈ ಮತದಾನದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ನಿಮ್ಮ ಅಮೂಲ್ಯ ಮತ ಚಲಾಯಿಸಿ. ರಾಜ್ಯ ಮತದಾರರ ಒಲವು ನಿಲವು ಎತ್ತ? ಎಂಬುದನ್ನು ನಿರ್ಧರಿಸಲು ನಿಮ್ಮ ಮತದಾನ ದಿಕ್ಸೂಚಿಯಾಗುವುದು.
ನಿಮ್ಮ ಮತ ಯಾವ ಪಕ್ಷಕ್ಕೆ? ಕಮೆಂಟ್ ಜಾಗದಲ್ಲಿ ನಿಮ್ಮ ಮತವನ್ನು ಸ್ಪಷ್ಟವಾಗಿ ನಮೂದಿಸಿ.












Click it and Unblock the Notifications