ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ಮಿಂಚಿನ ಮುಷ್ಕರ
ಮಂಗಳೂರು, ಏ.3 : ಉಡುಪಿ ಮತ್ತು ಮಂಗಳೂರು ನಡುವೆ ಓಡಾಡುವ ಖಾಸಗಿ ಬಸ್ ಸಿಬ್ಬಂದಿ ಗುರುವಾರ ಹಠಾತ್ ಮುಷ್ಕರ ಹೂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರು ಪರದಾಡಬೇಕಾಯಿತು.
ಮಂಗಳೂರು ಬಸ್ ನಿಲ್ದಾಣದಲ್ಲಿ ಹೋಗುವ ಮತ್ತು ಬರುವ ಬಸ್‌ಗಳ ವೇಳೆಯನ್ನು ನಮೂದಿಸಿಕೊಳ್ಳುವ ವ್ಯಕ್ತಿ ಮತ್ತು ಬಸ್ ಚಾಲಕನೊಬ್ಬನ ನಡುವೆ ಮಾತಿನ ಚಕಮಕಿ ನಡೆದು ಚಾಲಕನನ್ನು ಬುಧವಾರ ಸಾಯಂಕಾಲ ಥಳಿಸಿದ್ದರಿಂದ ಇಂದು ಸಿಬ್ಬಂದಿಗಳು ಹರತಾಳ ಹೂಡಿದ್ದರು.
ಮುಷ್ಕರಕ್ಕೆ ಎಲ್ಲಾ ಖಾಸಗಿ ಬಸ್ ಸಿಬ್ಬಂದಿಯಿಂದ ಸಂಪೂರ್ಣ ಸಹಕಾರ ದೊರೆತಿತ್ತು. ಯಾವುದೇ ಬಸ್ ಕೂಡ ಸಂಚರಿಸಲಿಲ್ಲ. ಇದರಿಂದಾಗಿ ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಕಚೇರಿ ಹೋಗುವ ಸಾರ್ವಜನಿಕರಿಗೆ ಅನನುಕೂಲತೆ ಉಂಟಾಯಿತು. ಕೆಲವರು ಕಚೇರಿಗೇ ಹೋಗದೆ ಮನೆಯಲ್ಲೇ ಉಳಿದರೆ ಇನ್ನು ಕೆಲವರು ಕಚೇರಿ ತಲುಪಲು ಅನ್ಯ ಮಾರ್ಗ ಕಂಡುಕೊಳ್ಳಬೇಕಾಯಿತು.
(ಯುಎನ್ಐ)












Click it and Unblock the Notifications