ರಾಜ್ಯದ 3 ಹಂತದ ಚುನಾವಣೆ ಎಲ್ಲಿ? ಯಾವಾಗ?
ಬೆಂಗಳೂರು, ಏ.3: ದೇಶದಲ್ಲೇ ಕ್ಷೇತ ಮರುವಿಂಗಡಣೆಯ ನಂತರ ಚುನಾವಣೆ ಎದುರಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ. ಕ್ಷೇತ್ರ ಮರುವಿಂಗಡಣೆಯ ನಂತರ ಸಿದ್ಧವಾಗಿರುವ ಮತದಾರರ ಪಟ್ಟಿಯಲ್ಲಿ 4,00,77,666 ಮತದಾರರಿದ್ದಾರೆ. ಇದರಲ್ಲಿ 2,03,99,338 ಪುರುಷರು ಹಾಗೂ 1,96,78,328 ಮಹಿಳೆಯರು ಇದ್ದಾರೆ. ಎಡಗೈ ತೋರು ಬೆರಳಿನ ಉಗುರಿನ ಮೇಲ್ಭಾಗದಿಂದ ಬೆರಳ ಮೊದಲ ಮಡಿಕೆವರೆಗೂ ಅಳಿಸದ ಉದ್ದಗೆರೆಯ ಶಾಯಿ ಗುರುತನ್ನು ಹಾಕುವುದು ಈ ಬಾರಿಯ ಚುನಾವಣಾ ವಿಶೇಷ. ಈ ಹಿಂದೆ ಎಡಗೈ ತೋರು ಬೆರಳಿನ ಉಗುರಿಗೆ ಅಳಿಸಲಾಗದ ಇಂಕಿನ ಚುಕ್ಕಿ ಇಡಲಾಗುತ್ತಿತ್ತು.
ಮೊದಲ ಹಂತ (ಮೇ.10):
ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಕೊಡಗು,ಮೈಸೂರು ಮತ್ತು ಚಾಮರಾಜನಗರ.
ಎರಡನೇ ಹಂತ(ಮೇ.16):
ರಾಯಚೂರು, ಕೊಪ್ಪಳ, ಉತ್ತರ ಕನ್ನಡ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವವೊಗ್ಗ, ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ.
ಮೂರನೇ ಹಂತ (ಮೇ.22):
ಬೆಳಗಾವಿ, ಬಾಗಲಕೋಟೆ, ವಿಜಾಪುರ, ಗುಲ್ಬರ್ಗ, ಬೀದರ್, ಗದಗ, ಧಾರವಾಡ ಮತ್ತು ಹಾವೇರಿ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications