ಶಾಸನಕರ್ತರ ವಿರುದ್ಧದ ಬಗೆಹರಿಯದ ಕೇಸುಗಳು
ನವದೆಹಲಿ, ಮಾ.11: ಹಾಲಿ ಸಂಸದರು ಹಾಗೂ ಶಾಸಕರ ಮೇಲಿನ ಇತ್ಯರ್ಥವಾಗದೆ ಉಳಿದಿರುವ 1,300 ವ್ಯಾಜ್ಯಗಳು ದೇಶದ ವಿವಿಧ ನ್ಯಾಯಾಲಯಗಳಲ್ಲಿ ಧೂಳು ತಿನ್ನುತ್ತಾಯಿವೆ. ಈ ಅಂಕೆ ಸಂಖ್ಯೆಗಳ ಮಾಹಿತಿಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಎಚ್.ಆರ್.ಭರದ್ವಾಜ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
ಮಾ.31, 2007ಕ್ಕೆ ಸಂಸತ್ತಿನ ಸ್ಥಾಯಿ ಸಮಿತಿಗೆ ಒಳಪಟ್ಟ ಇಲಾಖೆ ಸಂಗ್ರಹಿಸಿದ ಮಾಹಿತಿಯ ಮೇರೆಗೆ ಸಂಸದರ ಹಾಗೂ ಶಾಸಕರ ಬಗೆಗಿನ ಈ ಅಂಕೆಸಂಖ್ಯೆಗಳು ಲಭ್ಯವಾಗಿವೆ. ಸಂಸದರು ಹಾಗೂ ಶಾಸಕರ ವಿರುದ್ಧದ ಈ ರೀತಿಯ 65 ಪ್ರಕರಣಗಳನ್ನ್ನು ಸಿಬಿಐ ಈಗಾಗಲೇ ವಿಚಾರಣೆ ನಡೆಸುತ್ತಿದೆ ಎಂದು ಎಚ್.ಆರ್.ಭರದ್ವಾಜ್ ಹೇಳಿದರು.
ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸಂಸದ ಹಾಗೂ ಶಾಸಕರ ಬಗ್ಗೆ ಮಾಹಿತಿ ಕೊಡಬೇಕೆಂದು ಕೋರಲಾಗಿತ್ತು. ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒದಗಿಸಿದ ಮಾಹಿತಿಯ ಮೇರೆಗೆ ಸಂಸದ ಹಾಗೂ ಶಾಸಕರ ಬಗೆಗಿನ ಈ ಅಂಕೆ-ಸಂಖ್ಯೆಗಳು ಲಭ್ಯವಾಗಿವೆ ಎಂದು ಕೇಂದ್ರ ಸಚಿವ ಭರದ್ವಾಜ್ ರಾಜ್ಯಸಭೆಗೆ ತಿಳಿಸಿದ್ದಾರೆ. ಪ್ರಕರಣಗಳು ಬಾಕಿಯಿರುವ ರಾಜಕಾರಣಿಗಳ ರಾಜ್ಯಾವಾರು ಪಟ್ಟಿಯನ್ನು ಸಚಿವರು ಪ್ರಕಟಿಸಿಲ್ಲ.
(ಏಜೆನ್ಸೀಸ್)


Click it and Unblock the Notifications
