ಗಾಯಕಿ ಗಂಗೂಬಾಯಿ ಹಾನಗಲ್ ಜನ್ಮದಿನ
ಹುಬ್ಬಳ್ಳಿ, ಮಾ. 5: ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಅವರು ಇಂದು (ಮಾ. 5) 96 ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ದೇಶಪಾಂಡೆ ನಗರದ ಸ್ವಗೃಹ 'ಗಂಗಾ ಲಹರಿ' ಯಲ್ಲಿ ಕಿರಾಣೆ ಘರಾಣೆಯ ಈ ಮೇರು ವ್ಯಕ್ತಿ ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನೂರಾರು ಬುದ್ಧಿಮಾಂದ್ಯ ಮಕ್ಕಳ ಜೊತೆ ತಮ್ಮ 96 ನೇ ವರ್ಷದ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲಿದ್ದಾರೆ.
ಸಂಗೀತ ಸಮ್ರಾಜ್ಞಿಯ ಗೌರವ ಸೂಚಕವಾಗಿ ಅವರು ಹುಟ್ಟಿ ಬೆಳೆದ ಧಾರವಾಡದ ಶುಕ್ರವಾರ ಪೇಟೆಯಲಿನ ಮನೆಯನ್ನು ನವೀಕರಿಸಿರುವ ರಾಜ್ಯ ಸರ್ಕಾರ ಇಂದು ಅದನ್ನು ಹಾನಗಲ್ ಮ್ಯೂಸಿಕ್ ಫೌಂಡೇಶನ್ ಗೆ ಹಸ್ತಾಂತರಗೊಳಿಸಲಿದೆ. ಇದೇ ಸಂದರ್ಭದಲ್ಲಿ ಐಶ್ವರ್ಯ ಎಂಬ ಬಾಲೆಯ ಜಾದು ಪ್ರದರ್ಶನ ಹಾಗೂ ಸಂಜೆ 6:30 ರಿಂದ ಎರಡು ಗಂಟೆಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಷೇತ್ರದಲ್ಲಿನ ದಿಗ್ಗಜರ ಅಪರೂಪದ ವಿಡಿಯೋ ತುಣುಕುಗಳ ಪ್ರಸಾರ ಕಾರ್ಯ ನಡೆಯಲಿರುವುದು ಈ ಬಾರಿಯ ವಿಶೇಷವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications