ಆಕಾಶದತ್ತ ತಲೆಎತ್ತಿ ನೋಡಲು ಒಂದು ಅವಕಾಶ

India to witness partial lunar eclipse on Feb 21ಹೈದರಾಬಾದ್, ಫೆ.20: ಗುರುವಾರ(ಫೆ.21) ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಚಂದ್ರಗ್ರಹಣದ ಸ್ವಲ್ಪ ಭಾಗವನ್ನು ಮಾತ್ರ ಕಾಣಬಹುದು. ಭಾರತೀಯ ಕಾಲಮಾಲನದ ಪ್ರಕಾರ ಬೆಳಗ್ಗೆ 7.17 ಗಂಟೆಗೆ ಚಂದ್ರ ಗ್ರಹಣದ ಆರಂಭದ ಹಂತವನ್ನು ವಾಯುವ್ಯ ಭಾರತದ ಜನ 9 ನಿಮಿಷಗಳ ತನಕ ನೋಡಬಹುದು.

ಭಾರತದ ಬಹಳಷ್ಟು ಭಾಗಗಳಿಂದ ಗುರುವಾರದ ಸಂಪೂರ್ಣ ಚಂದ್ರಗ್ರಹಣ ಕಾಣಿಸುವುದಿಲ್ಲ. ಚಂದ್ರಗ್ರಹಣವು ಬೆಳಗ್ಗೆ 7.13 ಗಂಟೆಗೆ ಪ್ರಾರಂಭವಾಗಿ ನಂತರ ಬೆಳಗ್ಗೆ 8.30 ರಿಂದ 9.21ರ ಸಮಯದಲ್ಲಿ ಸಂಪೂರ್ಣ ಗ್ರಹಣ ಸಂಭವಿಸಲಿದೆ. ಅನಂತರ 10.39ರ ತನಕ ಭಾಗಶಃ ಕಾಣಿಸಿಕೊಳ್ಳಲಿದೆ ಎಂದು ಹೈದರಾಬಾದ್‌ನ ಬಿ.ಎಂ.ಬಿರ್ಲಾ ವಿಜ್ಞಾನ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ವಾಯುವ್ಯ ಭಾರತದ ಕೆಲ ಪ್ರದೇಶಗಳಿಂದ ಚಂದ್ರ ಗ್ರಹಣ ಆರಂಭದ ಒಂದು ಹಂತವನ್ನು ಮಾತ್ರ ವೀಕ್ಷಿಸಬಹುದು.ವಾಯುವ್ಯ ಭಾರತದ ಭುಜ್, ದ್ವಾರಕಾ, ಜಾಮ್‌ನಗರ್, ಜೈಸಲ್ಮೇರ್, ಲಖ್‌ಪತ್ ಹಾಗೂ ಪೋರ್‌ಬಂದರ್ ಪ್ರದೇಶಗಳಿಂದ ಬೆಳಗ್ಗೆ 7.17ರಿಂದ 7.25ರ ಅವಧಿಯಲ್ಲಿ ಚಂದ್ರ ಗ್ರಹಣವನ್ನು ಸ್ವಲ್ಪ ಮಟ್ಟಿಗೆ ವೀಕ್ಷಿಸಬಹುದು.

ಆರ್ಕ್‌ಟಿಕ್, ಪಶ್ಚಿಮ ಏಷ್ಯಾದ ಕೆಲ ಪ್ರದೇಶಗಳು, ಅರೇಬಿಯಾ, ಆಫ್ರಿಕಾ(ಮಡಗಾಸ್ಕರ್ ಹೊರತು ಪಡಿಸಿ), ಯೂರೋಪ್ ಮತ್ತು ಅಮೆರಿಕಾ ದೇಶಗಳಲ್ಲಿ ಸಂಪೂರ್ಣ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ಈ ಹಿಂದೆ ಚಂದ್ರ ಗ್ರಹಣ ಆಗಸ್ಟ್ 28, 2007ರಲ್ಲಿ ಸಂಭವಿಸಿತ್ತು. ಮುಂದಿನ ಚಂದ್ರ ಗ್ರಹಣ ನೋಡಬೇಕಾದರೆ ಡಿಸೆಂಬರ್21,2010ರ ತನಕ ಕಾಯಬೇಕಾಗುತ್ತದೆ ಎಂದು ಬಿ.ಎಂ.ಬಿರ್ಲಾ ವಿಜ್ಞಾನ ಕೇಂದ್ರ ತಿಳಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+