ಓಹಾ ಸರ್ವೀಸಸ್‌ನ ಉಚಿತ ಅಂತರ್ಜಾಲ ಸೇವೆ

oho internet access kioskಚೆನ್ನೈ, ಫೆ.20: ಮನೆಯಲ್ಲೊಂದು ಕಂಪ್ಯೂಟರ್ ಅದಕ್ಕೊಂದು ಅಂತರ್ಜಾಲ ಸಂಪರ್ಕ ಇದ್ದರೆ ಇಡೀ ಹೊರಜಗತ್ತಿನೊಂದಿಗೆ ಸಂಪರ್ಕ ಜೊತೆಗೆ ಮನರಂಜನೆಗೆ ಕೊರತೆ ಇರಲ್ಲ. ಈ ಕೊರತೆ ನೀಗಿಸಿಕೊಳ್ಳಲು ಯಾರಿಗೆ ತಾನೆ ಇಷ್ಟ ಇಲ್ಲ. ಹಾಗೆಂದೇ ವಿವಿಧ ಮಾಸಿಕ ಯೋಜನೆಗಳ ಮೂಲಕ ಇಂತಿಷ್ಟು ಹಣ ಪಡೆದು ಅಂತರ್ಜಾಲ ಸೇವೆ ಒದಗಿಸಲು ಬಿಎಸ್ಸೆನ್ನೆಲ್, ಏರ್‌ಟೆಲ್, ಟಾಟಾ ಇಂಡಿಕಾಮ್,ಸಿಫಿ, ರಿಲಯನ್ಸ್ ...ನಂತಹ ಹಲವಾರು ಸಂಸ್ಥೆ ಗಳು ಮುಂದೆ ಬರುತ್ತವೆ.

ಮತ್ತೆ ಕೆಲವೊಂದು ಸಂಸ್ಥೆಗಳು ಇಂತಿಷ್ಟು ಹಣ ಪೀಕಿ ರಾತ್ರಿ ವೇಳೆ ಉಚಿತ ಸೇವೆ ನೀಡುತ್ತವೆ. ಆದರೆ ಚೆನ್ನೈ ಮೂಲದ ಓಹಾ ಸರ್ವಿಸಸ್ ಎಂಬ ಸಂಸ್ಥೆ ನಯಾ ಪೈಸೆ ಪಡೆಯದೆ ಪುಕ್ಕಟೆಯಾಗಿ ಅಂತರ್ಜಾಲ ಸೇವೆ ನೀಡಲು ಮುಂದೆ ಬಂದಿದೆ.

ಮುಂಬರುವ ಆರು ತಿಂಗಳ ಅವಧಿಯಲ್ಲಿ ಚೆನ್ನೈ ನಗರದಲ್ಲಿ 100 ಕಿಯೋಸ್ಕ್‌ಗಳನ್ನು ಸ್ಥಾಪಿಸಿ ಉಚಿತವಾಗಿ ಅಂತರ್ಜಾಲ ಸೇವೆ ನೀಡುತ್ತೇವೆ. ಅನಂತರ ಈ ಸೇವೆಯನ್ನು ಮೆಟ್ರೋ ನಗರಗಳಾದ ಮುಂಬೈ ಹಾಗೂ ಬೆಂಗಳೂರಿಗೆ ವಿಸ್ತರಿಸುತ್ತೇವೆ. ಇದಾದ ನಂತರ ದಕ್ಷಿಣ ಭಾರತದ ಎರಡನೇ ಶ್ರೇಣಿಯ ನಗರಗಳಾದ ಪುಣೆ, ಕೊಚ್ಚಿ, ಹೈದರಾಬಾದ್‌ಗಳಿಗೆ ಉಚಿತ ಅಂತರ್ಜಾಲ ಸೇವೆ ವಿಸ್ತರಿಸಲಾಗುವುದು ಎಂದು ಓಹಾ ಸರ್ವೀಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಥಾಮಸ್ ಜಾನ್ ಹೇಳಿದರು.

ಭಾರತದಲ್ಲಿ ಅಂತರ್ಜಾಲ ಸೇವೆಗಳು ಈಗೀಗಷ್ಟೆ ಪ್ರಾಮುಖ್ಯತೆ ಪಡೆಯುತ್ತಿವೆ. ಅಂತರ್ಜಾಲ ಸಂಪರ್ಕ ಇಲ್ಲದೆ ಬದುಕಕ್ಕೇ ಆಗಲ್ಲ ಎಂಬ ಪರಿಸ್ಥಿತಿ ಇಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ನಾವು ಉಚಿತವಾಗಿ ಅಂತರ್ಜಾಲ ಸೇವೆ ಒದಗಿಸಿ ಜಾಹೀರಾತುಗಳ ಮೂಲಕ ಬರುವ ಆದಾಯದಿಂದ ಖರ್ಚನ್ನು ಸರಿದೂಗಿಸಿಕೊಳ್ಳುತ್ತೇವೆ ಎಂದು ಥಾಮಸ್ ಜಾನ್ ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+