ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾಹೂ ಖರೀದಿಗೆ ಮುಂದಾದ ಮೈಕ್ರೊಸಾಫ್ಟ್

By Staff
|
Google Oneindia Kannada News

Microsoft offers to buy Yahoo for $44.6 billionನ್ಯೂಯಾರ್ಕ್, ಫೆ.2: ಐಟಿ ದಿಗ್ಗಜ ಮೈಕ್ರೊಸಾಫ್ಟ್ ಕಂಪನಿಯು ಮತ್ತೊಂದು ಐಟಿ ಕಂಪನಿ ಯಾಹೂವನ್ನು 44.6 ಶತಕೋಟಿ ಡಾಲರ್‌ಗೆ ಖರೀದಿಸುವ ಪ್ರಸ್ತಾಪ ಸಲ್ಲಿಸಿದೆ.

ಯಾಹೂ ಕಂಪನಿಯ ಷೇರೊಂದಕ್ಕೆ 31ಡಾಲರ್ ಕೊಡಲು ಮೈಕ್ರೊಸಾಫ್ಟ್ ಸಂಸ್ಥೆ ಮುಂದೆ ಬಂದಿದೆ. ಗುರುವಾರ(ಜ.31) ಅಂತ್ಯವಾದ ನಾಸ್‌ಡಾಕ್‌ನ ಷೇರು ಮಾರುಕಟ್ಟೆಯ ಮೌಲ್ಯಕ್ಕಿಂತಲೂ ಇದು ಶೇ.62ರಷ್ಟು ಅಧಿಕ ಎಂದು ಮೈಕ್ರೊಸಾಫ್ಟ್ ತಿಳಿಸಿದೆ.

ಯಾಹೂ ಸಂಸ್ಥೆಯೊಂದಿಗೆ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಗ್ರಾಹಕರಿಗೆ, ಪ್ರಕಾಶಕರಿಗೆ ಹಾಗೂ ಜಾಹೀರಾತುದಾರರಿಗೆ ನಾವು ಉತ್ತಮ ಸೇವೆ ಒದಗಿಸಿದ್ದೇವೆ. ಆನ್‌ಲೈನ್ ಸೇವೆಯಲ್ಲಿ ನಮ್ಮಬ್ಬರಿಗೂ ಆರೋಗ್ಯಕರವಾದ ಪೈಪೋಟಿ ಇತ್ತು ಎಂದು ಮೈಕ್ರೊಸಾಫ್ಟ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಟೀವ್ ಬಾಲ್ಮರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಾಹೂ ಸಂಸ್ಥೆಯನ್ನು ಖರೀದಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಶುಕ್ರವಾರದ ಯುಎಸ್ ಷೇರು ಮಾರುಕಟ್ಟೆಯಲ್ಲಿ ಯಾಹೂ ಸಂಸ್ಥೆಯ ಷೇರುಗಳು ಶೇ.56ರಷ್ಟು ಏರಿಕೆ ಕಂಡಿವೆ. ಯಾಹೂ ಸಂಸ್ಥೆ ಈ ಬಗ್ಗೆ ಏನನ್ನೂ ಪ್ರತಿಕ್ರಿಯಿಸಿಲ್ಲ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X