ಹುಬ್ಬಳ್ಳಿ: ಶಂಕಿತ ಭಯೋತ್ಪಾದಕರ ಬಂಧನ
ಹುಬ್ಬಳ್ಳಿ, ಜ.25: ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಿ ಕಿಮ್ಸ್ ವಿದ್ಯಾರ್ಥಿನಿಲಯದ ಇಬ್ಬರು ವಿದ್ಯಾರ್ಥಿಗಳು ಹಾಗೂ ಬಿವಿಬಿ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರನ್ನು ಮಹಮ್ಮದ್ ಆಸೀಫ್, ಇಸ್ಮಾಯಿಲ್ ಎಂದು ಗುರುತಿಸಲಾಗಿದ್ದು , ಮತ್ತೊಬ್ಬನ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಗುರುವಾರ ಹುಬ್ಬ್ಬಳ್ಳಿಯ ಹೇಮಂತ ನಗರದಲ್ಲಿರುವ ಇಸ್ಮಾಯಿಲ್ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು ರಿವಾಲ್ವರ್, ಬುಲೆಟ್ಸ್ ಹಾಗೂ ಜಿಹಾದ್‌ಗೆ ಸಂಬಂಧಿಸಿದ ಪುಸ್ತಕ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿವಿಬಿ ಕಾಲೇಜಿನ ವಿದ್ಯಾರ್ಥಿ ಮಹಮ್ಮದ್ ಆಸೀಫ್ ಜೊತೆ ಸಂಪರ್ಕವಿರುವ ಹೆಗ್ಗೇರಿಯ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಬಿವಿಬಿ ಕಾಲೇಜಿನ ಮತ್ತಷ್ಟು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕಿಮ್ಸ್, ಬಿವಿವಿ ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಓದುತ್ತಾ ಬೇರೆಡೆ ಮನೆಮಾಡಿಕೊಂಡಿರುವ ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕವಿರುವ ಮತ್ತಷ್ಟು ವಿದ್ಯಾರ್ಥಿಗಳ ಜಾತಕ ಸದ್ಯದಲ್ಲೇ ಬಯಲಾಗಲಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ(ಕಾನೂನು ಮತ್ತು ಸುವ್ಯವಸ್ಥೆ) ಶಂಕರ್ ಬಿದರಿ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications