ಟ್ವೆಂಟಿ20 ಕ್ರಿಕೆಟ್ ಲೀಗ್ :ಬೆಂಗಳೂರು ತಂಡ ಮಲ್ಯಗೆ

ಟ್ವೆಂಟಿ20 ಕ್ರಿಕೆಟ್ ಲೀಗ್ :ಬೆಂಗಳೂರು ತಂಡ ಮಲ್ಯಗೆಮುಂಬೈ, ಜ.25: ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್ )ಎಂಬ ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಯ ತಂಡಗಳ ಖರೀದಿಗಾಗಿ ನಡೆದ ಹರಾಜಿನಲ್ಲಿ ಬೆಂಗಳೂರು ತಂಡದ ಒಡೆತನ ಮದ್ಯದ ದೊರೆ ವಿಜಯ ಮಲ್ಯ ಪಾಲಾಗಿದೆ. ಉಳಿದಂತೆ ಬಾಲಿವುಡ್ ತಾರೆಯರು, ಖ್ಯಾತ ಉದ್ಯಮಿಗಳು ತಮ್ಮ ನೆಚ್ಚಿನ ತಂಡವನ್ನು ಖರೀದಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಲಿ (ಬಿಸಿಸಿಐ)ಹುಟ್ಟುಹಾಕಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಎಂಬ ಟ್ವೆಂಟಿ 20 ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಮುನ್ನವೇ 7000 ಕೋಟಿ ರೂ. ಸಂಗ್ರಹಿಸಿದೆ. ಗುರುವಾರ ನಡೆದ ಹರಾಜಿನಲ್ಲಿ ಐಪಿಎಲ್‌ನ ಮುಂಬೈ ತಂಡ 448 ಕೋಟಿ ರೂ.ಗಳಿಗೆ ಮಾರಾಟವಾಗಿದೆ. ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿಯೇ ಈ ಮೊತ್ತಕ್ಕೆ ಖರೀದಿಸಿದ ವ್ಯಕ್ತಿ. ಬೆಂಗಳೂರು ತಂಡ ಎರಡನೆಯ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದೆ. ಬೆಂಗಳೂರು ತಂಡದ ಹರಾಜನ್ನು 446 ಕೋಟಿ ರೂ.ಗಳಿಗೆ ವಿಜಯ್ ಮಲ್ಯ ಖರೀದಿಸಿದ್ದಾರೆ.

ಬಾಲಿವುಡ್ ತಾರೆಯರಾದ ಶಾರೂಕ್ ಖಾನ್, ಜೂಹಿ ಚಾವ್ಲಾ, ಪ್ರೀತಿ ಝಿಂಟಾ ಸಹಾ ಐಪಿಎಲ್ ತಂಡಗಳನ್ನು ಖರೀದಿಸಿದ್ದಾರೆ. ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ ಸಂಸ್ಥೆ(ರೆಡ್ ಚಿಲ್ಲೀಸ್) ಕೋಲ್ಕತ್ತಾ ತಂಡವನ್ನು 300 ಕೋಟಿ ರೂ.ಗೆ ಖರೀದಿಸಿದೆ. ಪಂಜಾಬಿನ ಮೊಹಾಲಿ ತಂಡವನ್ನು ಪ್ರೀತಿ ಝಿಂಟಾ ಮತ್ತು ಆಕೆಯ ಪ್ರಿಯಕರ ನೆಸ್ ವಾಡಿಯಾ 304 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ. ಹೈದರಾಬಾದ್ ತಂಡವನ್ನು ಡೆಕ್ಕನ್ ಕ್ರಾನಿಕಲ್ ಪತ್ರಿಕೆಯ ಟಿ.ವಿ.ರೆಡ್ಡಿ 428 ಕೋಟಿ ರೂ.ಗಳಿಗೆ, ಚೆನ್ನೈ ತಂಡವನ್ನ್ನುಇಂಡಿಯಾ ಸಿಮೆಂಟ್‌ನ ಶ್ರೀನಿವಾಸ್ 364 ಕೋಟಿ ರೂ.ಗೆ, ಜೈಪುರ ತಂಡವನ್ನು ಎಮರ್ಜಿಂಗ್ ಇಂಡಿಯಾ ಸಂಸ್ಥೆಯ ಮನೋಜ್ ಬಡಾಲೆ 268 ಕೋಟಿ ರೂ.ಗೆ, ದೆಹಲಿ ತಂಡವನ್ನು ಜಿ.ಎಂ.ಆರ್ ಸಂಸ್ಥೆಯ ಜಿ.ಎಂ. ರಾವ್ 336 ಕೋಟಿ ರೂ.ಗೆ ಖರೀದಿಸಿದ್ದಾರೆ.

ಏನಿದರ ವಿಶೇಷಗಳು?

ಟ್ವೆಂಟಿ20 ಕ್ರಿಕೆಟ್ ಪಂದ್ಯಾವಳಿಗಳು ಏ.18ರಿಂದ ಆರಂಭವಾಗಲಿದೆ. ಇದರಲ್ಲಿ 8 ತಂಡಗಳು, ಪ್ರತಿ ತಂಡದಲ್ಲಿ ದೇಶ ವಿದೇಶಗಳ ಆಟಗಾರರು ಆಡಲಿದ್ದಾರೆ. 44 ದಿನಗಳ ಕಾಲ 59 ಪಂದ್ಯಗಳು ನಡೆಯಲಿವೆ. ಐಪಿಎಲ್ ಟ್ವೆಂಟಿ20 ಪಂದ್ಯಾವಳಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಉಳಿದ ಪಂದ್ಯಗಳು ದೇಶದ ವಿವಿಧ ನಗರಗಳಲ್ಲಿ ನಡೆಯಲಿವೆ. ಐಸಿಸಿ ಮಾನ್ಯತೆ ಇರುವ ಅಂಪೈರ್‌ಗಳು ಇದರಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 29 ದೇಶೀ ಆಟಗಾರರು ಒಳಗೊಂಡಂತೆ ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್‌ನ 79 ಆಟಗಾರರು ಐಪಿಎಲ್‌ ಸೇರಲಿದ್ದಾರೆ.

ಹರಾಜು ಗೆದ್ದವರಿಗೆ ಏನು ಲಾಭ ?

ಐಪಿಎಲ್ ಟ್ವೆಂಟಿ20 ತಂಡಗಳನ್ನು ಖರೀದಿಸಿರುವವರಿಗೆ ಮುಂದಿನ 10 ವರ್ಷಗಳ ಕಾಲ ಆದಾಯ ಹರಿದುಬರಲಿದೆ. ಮಾಧ್ಯಮ ಹಕ್ಕಿನಿಂದ ಬರುವ ಆದಾಯದಲ್ಲಿ ಪ್ರತಿ ತಂಡದ ಮಾಲೀಕರು ಮೊದಲ ವರ್ಷ ಶೇ.80 ಹಾಗೂ 2,3,4ನೇ ವರ್ಷಗಳಲ್ಲಿ ಕ್ರಮವಾಗಿ ಶೇ.70, ಶೇ.65 ಹಾಗೂ ಶೇ.60ರಷ್ಟು ಪಾಲು ಸಿಗಲಿದೆ. ಇದರ ಜೊತೆಗೆ ಮಾರಾಟವಾದ ಟಿಕೆಟ್ ಹಣ, ಪ್ರಚಾರ ಕಾರ್ಯಕ್ರಮಗಳ ಆದಾಯ ಆಯಾ ತಂಡಗಳ ಮಾಲೀಕರ ಜೋಳಿಗೆ ತುಂಬಲಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+