ಕಾಶ್ಮೀರದ ಮುಡಿಗೆ ಟ್ಯುಲಿಪ್ ಬೆಡಗು
ಶ್ರೀನಗರ, ಜ.15: ಭೂಲೋಕದ ಸ್ವರ್ಗ ಕಾಶ್ಮೀರದ ಅಂದಚಂದಗಳನ್ನು ವರ್ಣಿಸಲು ಪದಗಳಿಗಾಗಿ ತಡಕಾಡಬೇಕಾಗುತ್ತದೆ. ಅದರಲ್ಲೂ ದಾಲ್ ಸರೋವರ ಸೌಂದರ್ಯಕ್ಕೆ ಮಂತ್ರ ಮುಗ್ಧರಾಗುತ್ತೇವೆ. ಆ ಸರೋವರದ ದಡದಲ್ಲಿ 60ಕ್ಕೂ ಹೆಚ್ಚು ಬಗೆಯ ಟ್ಯುಲಿಪ್ ಹೂಗಳನ್ನು ಬೆಳೆಯಲಾಗುತ್ತಿದೆ.
ಇದು ಏಷ್ಯಾದಲ್ಲೇ ಅತಿ ದೊಡ್ಡದಾದ ಟ್ಯುಲಿಪ್ ಹೂಗಳ ಉದ್ಯಾನ. ಈಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಒಂದು ಕಡೆ ಝಬರ್‍ಬನ್ ಬೆಟ್ಟಸಾಲುಗಳು ಮತ್ತೊಂದೆಡೆ ಪುಷ್ಪರಾಶಿ ಮನತಣಿಸುತ್ತವೆ. ಹಾಲಂಡ್ ದೇಶದಿಂದ ಟ್ಯುಲಿಪ್ ಹೂಗಳನ್ನು ಆಮದು ಮಾಡಿಕೊಂಡು ಕೃಷಿ ಮಾಡಲಾಗುತ್ತಿದೆ.
(ದಟ್ಸ್‌ಕನ್ನಡ ವಿಡಿಯೋ)












Click it and Unblock the Notifications