ಯಶಸ್ವಿಯಾದ ಪಿಎಸ್‌ಎಲ್‌ವಿ ಪ್ರಯೋಗ
ಶ್ರಿಹರಿಕೋಟ, ಜ.21: ಸತೀಶ್ ಧವನ್ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಂದು ಮತ್ತೊಂದು ವಿಜಯಕ್ಕೆ ಸಾಕ್ಷಿಯಾಯಿತು. ಸೋಮವಾರ ಬೆಳಗ್ಗೆ 9.15ಕ್ಕೆ ಪಿಎಸ್‌ಎಲ್‌ವಿ ಸಿ10 ಎಂಬ ರಾಕೆಟ್ಟನ್ನು ಇಸ್ರೊ ಯಶಸ್ವಿಯಾಗಿ ಪ್ರಯೋಗಿಸಿದೆ.
ನಾಲ್ಕು ಹಂತಗಳಲ್ಲಿ ರಾಕೆಟ್ ಬಾಹ್ಯಾಕಾಶಕ್ಕೆ ಮುನ್ನುಗ್ಗಿತು.ಈ ರಾಕೆಟ್‌ನ ಮೂಲಕ ಇಸ್ರೇಲ್‌ನ 300ಕೆ.ಜಿ ತೂಕದ 'ಪೊಲಾರಿಸ್" ಉಪಗ್ರಹವನ್ನೂ ಬಾಹ್ಯಾಕಾಶಕ್ಕೆ ಕಳುಹಿಸಲಾಯಿತು. ಈ ಪ್ರಯೋಗದಿಂದ ವಾಣಿಜ್ಯಪರವಾಗಿ ಇನ್ನಷ್ಟುಉಪಗ್ರಹಗಳನ್ನು ಉಡಾವಣೆ ಮಾಡಲು ಇಸ್ರೊಗೆ ಸಾಧ್ಯವಾಗಲಿದೆ. ಉಡಾವಣೆ ಯಶಸ್ವಿಯಾದ ಕಾರಣ ಇಸ್ರೊ ಮತ್ತು ಇಸ್ರೇಲ್ ವಿಜ್ಞಾನಿಗಳು ಸಂಭ್ರಮಿಸಿದರು.
ಉಪಗ್ರಹವನ್ನು ಪಿಎಸ್‌ಎಲ್‌ವಿ ರಾಕೆಟ್ ಮೂಲಕ ಕಕ್ಷೆಗೆ ಕಳುಹಿಸುತ್ತಿರುವುದು ಇದು ಎರಡನೆ ಬಾರಿ. ಏಪ್ರಿಲ್,2007ರಲ್ಲಿ ಇಟಲಿಯ 'ಅಜೈಲ್' ಎಂಬ ಉಪಗ್ರಹವನ್ನು ಕಕ್ಷೆಗೆ ಕಳುಹಿಸಲಾಗಿತ್ತು ಎಂದು ಇಸ್ರೊ ಮೂಲಗಳು ತಿಳಿಸಿವೆ.
(ಏಜನ್ಸೀಸ್)












Click it and Unblock the Notifications