2008ರಿಂದ ವೃತ್ತಿ ತೆರಿಗೆ ದುಪ್ಪಟ್ಟು? ತೆರಿಗೆ ಯಾರಿಗೆ?
ನವದೆಹಲಿ, ಡಿ.17 : ಸ್ವಯಂ ಉದ್ಯೋಗಿಗಳು, ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಸಂಬಳದಾರರು ಹಾಗೂ ಇತರ ಉದ್ಯಮಿಗಳು ಮುಂದಿನ ಆರ್ಥಿಕ ವರ್ಷದಿಂದ ಹೆಚ್ಚಿನ ವೃತ್ತಿಪರ ಆದಾಯ ತೆರಿಗೆಯನ್ನು ಕಟ್ಟಬೇಕಾಗುತ್ತದೆ.
ತೆರಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ 276ಕಾಯಿದೆಗೆ ತಿದ್ದುಪಡಿ ಮಾಡುವ ಬಗ್ಗೆ ತೀವ್ರವಾಗಿ ಚಿಂತನೆ ನಡೆಸಿದೆ. ಇದರ ಪರಿಣಾಮವಾಗಿ ವೃತ್ತಿ ತೆರಿಗೆ ದರಗಳು ವೃತ್ತಿದಾರರ ಶ್ರೇಣಿಗನುಸಾರವಾಗಿ ದುಪ್ಪಟ್ಟಾಗುತ್ತದೆ. ಉದಾ : ವಾರ್ಷಿಕ ಗರಿಷ್ಠ 2,500ರೂ.ನಿಂದ 5,000ರೂ.( ಗರಿಷ್ಠ)ಗೆ ಹೆಚ್ಚುವ ಸಂಭವವಿದೆ.
ವೃತ್ತಿಪರರು, ಉದ್ಯಮಿಗಳು ಇತರ ಕೆಲಸಗಾರರಿಂದ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರಗಳು ಸುಮಾರು 3,000 ಕೋಟಿ ರೂ.ಸಂಗ್ರಹಿಸುತ್ತದೆ.ರಾಜ್ಯ ಸರ್ಕಾರಗಳ ಬಹುದಿನದ ಬೇಡಿಕೆಗೆ ಮಣಿದಿರುವ ಕೇಂದ್ರ ಸರ್ಕಾರ 276 ಕಾಯಿದೆಗೆ ತಿದ್ದುಪಡಿ ತರುವ ಸಾಧ್ಯತೆಯಿದೆ. ಕೆಲವು ರಾಜ್ಯ ಸರ್ಕಾರಗಳು ತೆರಿಗೆ ದರವನ್ನು 10,000ರೂ.ಗಳಿಗೆ ಹೆಚ್ಚಿಸುವಂತೆ ಕೋರಿವೆ. 1998ರಲ್ಲಿ ಕೇಂದ್ರ ಸರ್ಕಾರ ತೆರಿಗೆ ದರವನ್ನು 2,500ರೂ.ಗಳಿಗೆ ಸೀಮಿತಗೊಳಿಸಿತ್ತು.
ಆದಾಯ ತೆರಿಗೆದಾರರು ತಮ್ಮ ವಾರ್ಷಿಕ ತೆರಿಗೆ ಘೋಷಣೆ ಮಾಡುವಾಗ ವೃತ್ತಿತೆರಿಗೆ ಮೊತ್ತವನ್ನು ಸೂಚಿಸಿ ತೆರಿಗೆ ಕಡಿತ ಸೌಲಭ್ಯ ಬಳಸಬಹುದಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications