ಮರೆತಿರಾ ಭಾರತದ ವಿಜಯೋತ್ಸವ?
ನವದೆಹಲಿ, ಡಿ.17 : ಭಾನುವಾರ(ಡಿ.16) ಸಂಭ್ರಮದ ವಿಜಯೋತ್ಸವವನ್ನು ದೇಶವ್ಯಾಪಿ ಆಚರಿಸಬೇಕಾಗಿತ್ತು. ಆದರೆ ಅನೇಕರು ಮರೆತುಬಿಟ್ಟಿದ್ದಾರೆ. ಪಾಕಿಸ್ತಾನವನ್ನು 1971ರ ಡಿ.16ರಂದು ಭಾರತೀಯ ಸೈನ್ಯ ಬಗ್ಗುಬಡಿದ ವಿಶೇಷತೆ ಅನೇಕರಿಗೆ ಗೊತ್ತಿಲ್ಲ. 36ವರ್ಷಗಳ ಹಿಂದಿನ ಯುದ್ಧದಲ್ಲಿ ಮಡಿದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ನೆನಪು ಎಷ್ಟು ಮಂದಿಗಿದೆ? ಈ ಯುದ್ಧದಲ್ಲಿಯೇ ಬಾಂಗ್ಲಾದೇಶ ಪಾಕ್ ನಿಂದ ಪ್ರತ್ಯೇಕಗೊಂಡು, ಸ್ವತಂತ್ರ ದೇಶವಾದದ್ದು.
ವಿಜಯೋತ್ಸವ ಆಚರಣೆ ಮುಖಾಂತರ ಭಾರತೀಯ ಸೈನಿಕರ ದಿಟ್ಟತನ ಮತ್ತು ಶೌರ್ಯವನ್ನು ನವದೆಹಲಿಯಲ್ಲಿ ಸ್ಮರಿಸಲಾಯಿತು. ಅಮರ್ ಜವಾನ್ ಜ್ಯೋತಿ ಬಳಿ ಈ ಸಂಬಂಧ ಕಾರ್ಯಕ್ರಮವೊಂದು ನಡೆಯಿತು. ಈ ಬಗೆಗಿನ ಹೆಚ್ಚಿನ ವಿವರಗಳು ಕೆಳಗಿನ ವಿಡಿಯೋ ಫೈಲಲ್ಲಿ ಅಡಕವಾಗಿವೆ.












Click it and Unblock the Notifications