ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೂಕಡಿಸುವ ತಮ್ಮಂದಿರು ಮಂಕುತಿಮ್ಮರಲ್ಲ!

By Staff
|
Google Oneindia Kannada News

ಅಲ್ಬನಿ, ಡಿ.15 : ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರವಾಗಿತ್ತಿದ್ದಂತೆ ನಿದ್ದೆ ಇಲ್ಲದ ರಾತ್ರಿಗಳು ಹೆಚ್ಚಾಗುತ್ತವೆ. ಹಾಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದರೇನೇ ಹೆಚ್ಚು ಅಂಕಗಳು ಬರುವುದು ಅಂತ ನೀವೇನಾದರೂ ನಂಬಿದ್ದರೆ. ಆ ನಂಬಿಕೆಯನ್ನು ನಿಮ್ಮ ತಲೆಯಿಂದ ಕಿತ್ತೊಗೆದು ಬೆಚ್ಚಗೆ ಮಲಗಿ ಪರೀಕ್ಷೆ ಬರಿಯಿರಿ. ಅಂಕಗಳು, ಗ್ರೇಡ್‌ಗಳು ಹೆಚ್ಚಿಗೆ ಬರುತ್ತವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

120 ವಿದ್ಯಾರ್ಥಿಗಳೊಂದಿಗೆ ಸಮೀಕ್ಷೆ ನಡೆಸಿದ ಸೇಂಟ್ ಲಾರೆನ್ಸ್ ವಿವಿ, ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತೆಂದರೆ; ರಾತ್ರಿ ಹೊತ್ತು ಹೆಚ್ಚಿಗೆ ನಿದ್ದೆಗೆಡಬೇಡಿ. ಬೇಗ ಮಲಗಿ. ಆಗ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳು ಬರುತ್ತವೆ. ಇದು ನಿಜ, ನಂಬಿ. ರಾತ್ರಿಹೊತ್ತು ಹೆಚ್ಚಿಗೆ ನಿದ್ದೆಗೆಟ್ಟು ಓದಿದ ವಿದ್ಯಾರ್ಥಿಗಳಿಗೆ ಕಡಿಮೆ ಅಂಕಗಳು ಬಂದಿವೆ. ನಿದ್ದೆಗೆಡದೆ ಬೆಚ್ಚಗೆ ಮಲಗಿದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಿರುವುದಾಗಿ ವಿವಿ ಸಮೀಕ್ಷೆ ರುಜುವಾತು ಪಡಿಸಿದೆ.

ರಾತ್ರಿ ಬೆಚ್ಚಗೆ ರಗ್ಗು ಹೊದ್ದಿ ಮಲಗಿದ ವಿದ್ಯಾರ್ಥಿಗಳಿಗೆ 3.1 ಗ್ರೇಡ್ ಸರಾಸರಿ ಅಂಕಗಳು ಬಂದರೆ, ಜಾಗರಣೆ ಮಾಡಿದ ವಿದ್ಯಾರ್ಥಿಗಳಿಗೆ 2.9 ಗ್ರೇಡ್ ಸರಾಸರಿ ಅಂಕಗಳು ಬಂದಿವೆ. ಯಾರು ಬುದ್ಧಿವಂತರು ಯಾರು ದಡ್ಡರು ಅಂತಾ ತಿಳೀತಲ್ಲ. ಮನೋವಿಜ್ಞಾನದ ಪಮೇಲಾ ಟೀಚರ್ ನಿದ್ದೆ ಬಗ್ಗೆ ಹೇಳುವುದೇನೆಂದರೆ, ಮುಂಜಾನೆ ನಾಲ್ಕು ಗಂಟೆ ಸಮಯದಲ್ಲಿ ಯೋಚನಾ ಶಕ್ತಿ ಕಡಿಮೆ ಇರುತ್ತದೆ. ಬೇಕಿದ್ದರೆ ಯೋಚಿಸಿ ನೋಡಿ, ಸಾಧ್ಯವಾಗುವುದಿಲ್ಲ ಅಂತಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X