ಮಾಜಿ ರೌಡಿ ಜಡೇಜಾ ರವಿ ಭೀಕರ ಕೊಲೆ : ಮಂಡ್ಯ ತಲ್ಲಣ
ಮಂಡ್ಯ, ಡಿ.8 : ಇಲ್ಲಿನ ರೌಡಿಸಂ ತನ್ನ ಕರಾಳತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದು, ನಗರಸಭಾ ಸದಸ್ಯ ಮತ್ತು ರೌಡಿ ರವಿ ಅಲಿಯಾಸ್ ಜಡೇಜಾ ರವಿ ಹತ್ಯೆಯಿಂದ ನಗರ ತಲ್ಲಣಗೊಂಡಿದೆ.
ಮೈಸೂರು ಹೆದ್ಧಾರಿಯಲ್ಲಿನ ಯಲಿಯೂರು ವೃತ್ತದ ಸಮೀಪ 15ಜನರ ರೌಡಿ ಪಡೆ, ಜಡೇಜಾ ರವಿಯನ್ನು ಹತ್ಯೆ ಮಾಡಿದೆ. ತಿಥಿ ಕಾರ್ಯಕ್ಕಾಗಿ ತೆರಳುತ್ತಿದ್ದ ರವಿಯನ್ನು ಮಾರ್ಗ ಮಧ್ಯೆ ತಡೆದ ಗುಂಪು, ಭೀಕರವಾಗಿ ಹತ್ಯೆಗೈದಿದೆ. ಈ ಘರ್ಷಣೆಯಲ್ಲಿ ಇತರೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರಣವೇನು ?
ಯಾವುದೋ ಹಳೆಯ ದ್ವೇಷ ಈ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರವಿ ಮೇಲೆ ಹತ್ಯೆಗಾರರಿಗೆ ಎಷ್ಟು ಸಿಟ್ಟಿದ್ದು ಎಂದರೆ, ಅವರ ಎಡಗೈಯನ್ನು ಸಂಪೂರ್ಣವಾಗಿ ಕತ್ತರಿಸಿಹಾಕಿದೆ.
ನಾಗಮಂಗಲ ರಸ್ತೆ ಬಳಿ ಎರಡು ವರ್ಷಗಳ ಹಿಂದೆ ಚೀರನಹಳ್ಳಿ ಶಂಕರ ಶಂಕರ ಮತ್ತು ಆತನ ಸಹೋದರ ಶಿವರಾಮ ಎನ್ನುವ ವ್ಯಕ್ತಿಗಳ ಕೊಲೆ ನಡೆದಿತ್ತು. ಈ ಕೊಲೆಗೆ ಪ್ರತೀಕಾರವಾಗಿ ರವಿ ಹತ್ಯೆ ನಡೆದಿದೆ ಎನ್ನಲಾಗಿದೆ. ಇವರ ಸಮಾಧಿ ಮೇಲೆ ರವಿ ಎಡಗೈಯನ್ನು ಇಟ್ಟಿರುವುದು ಈ ಅನುಮಾನಕ್ಕೆ ಮೂಲ ಕಾರಣ.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications
