ಹೌದಪ್ಪಹೌದು! ಗೋವಾ ಕನ್ನಡಿಗರ ಗೋಳು ಕೇಳೋರಿಲ್ಲ!
ಬೆಂಗಳೂರು, ನ.26 : ಗೋವಾ ಕನ್ನಡಿಗರ ಕೂಗು ಮುಗಿಲು ಮುಟ್ಟಿದೆ. ಅಲ್ಲಿ ಕನ್ನಡಿಗರ ಅಹವಾಲು ಕೇಳುವವರೇ ಇಲ್ಲಾ ಎಂದು ವಾಸ್ಕೊ ಕರ್ನಾಟಕ ಸಂಘ ಆರೋಪಿಸಿದೆ.
ಗೋವಾದಲ್ಲಿನ ಕನ್ನಡಿಗರ ಸಂಖ್ಯೆ ಅಂದಾಜು 3ರಿಂದ 5ಲಕ್ಷದಷ್ಟು. 2003ರ ಜೂ.14ರಂದು ಬೈನಾ ಬೀಚ್ ಬಳಿ ಇದ್ದ 350ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಲಾಗಿತ್ತು. ಆದರೆ ಇದುವರೆಗೆ ಗೋವಾ ಸರಕಾರ ಯಾವುದೇ ಪರಿಹಾರ ನೀಡಿಲ್ಲ. ಕರ್ನಾಟಕ ಸರಕಾರವೂ ಸಹಾಯಕ್ಕೆ ಮುಂದಾಗಿಲ್ಲ. ಹಾಗೆಯೇ ಅಲ್ಲಿ ಕನ್ನಡ ಶಾಲೆ ಇಲ್ಲದೆ ಹತ್ತನೆ ತರಗತಿ ಪರೀಕ್ಷೆ ಬರೆಯಲು ಕಾರವಾರ ಅಥವಾ ಬೆಳಗಾವಿ ಜಿಲ್ಲೆಗಳಿಗೆ ಹೋಗಬೇಕಾಗಿದೆ ಎಂದು ಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗೋವಾ ಕನ್ನಡಿಗರಲ್ಲಿ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಡಿ.2ರಂದು ಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವನ್ನು ವಾಸ್ಕೊದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
(ದಟ್ಸ್‌ಕನ್ನಡ ವಾರ್ತೆ)
ಮತ್ತಷ್ಟು ಗೋವಾ ಕನ್ನಡಿಗರ ಸುದ್ದಿಗಳು :
ಗೋವೆಯ ಬೀಚಿನಲ್ಲಿ ಕನ್ನಡದ ಕೂಲಿಕಾರ ಮತ್ತು ಮೈ ಕಸುಬಿನವಳು!
ಗೋವಾಕ್ಕೆ ತೆರಳಲು ಹೆದರುತ್ತಿರುವ ಉತ್ತರ ಕನ್ನಡ ಜಿಲ್ಲೆಯ ವ್ಯಾಪಾರಿಗಳು !
ಕನ್ನಡ ಬಂತು ಗೋವೆಗೆ, ಬೀದಿಗೆ ...












Click it and Unblock the Notifications