ಲಂಡನ್ ಬಿಳಿಯರ ಕೆಂಗಣ್ಣಿಗೆ ಗುರಿಯಾದಳು ಬಿಸಿಬಿಸಿ ಬಿಪಾಶಾ
ನವದೆಹಲಿ, ನ. 26 : "ಗೋಲ್" ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಾವಿಬ್ಬರು ಜನಾಂಗದ್ವೇಷದ ಅವಹೇಳನ ಉಣ್ಣಬೇಕಾಯಿತು ಎಂದು ಬಾಲಿವುಡ್ಡಿನ ಇಬ್ಬರು ಪ್ರಖ್ಯಾತ ನಟಿಯರು ತಡವಾಗಿ ಆಪಾದಿಸಿದ್ದಾರೆ. ಅವರಿಗೆ ಅಪಮಾನವಾದದ್ದು ಲಂಡನ್ನಿನ ಒಂದು ಪಡಖಾನೆಯಲ್ಲಿ. ಏಷಿಯಾದ ರತಿ ಎಂದು ಬಿರುದಾಂಕಿತರಾಗಿರುವ ಬಿಪಾಶಬಸು ಮತ್ತು ಅವರ ಜತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅರ್ಶದ್ ವಾರ್ಸಿ ಅವರನ್ನು ಬಿಳಿ ಚರ್ಮದ ಕೆಲವರು ಆವತ್ತು ನಿಂದಿಸಿ, ದೂಷಿಸಿ ಅಪಮಾನ ಮಾಡಿದರಂತೆ.
ಲಂಡನ್ನಿನ ಸೌತ್ ಹಾಲ್ ಪ್ರದೇಶದ ಹೆಸರಾಂತ ಪಬ್ "ಗ್ಲಾಸೀ ಜಂಕ್ಷನ್" ನಲ್ಲಿ ಕೆಲವು ತಿಂಗಳ ಹಿಂದೆ ಧನ್ ಧನಾ ಧನ್ 'ಗೋಲ್' ಚಿತ್ರೀಕರಣದ ವೇಳೆ ಈ ಘಟನೆ ನಡೆಯಿತು. ನಮ್ಮ ಜನಾಂಗವನ್ನು ಹೀಗಳೆದದ್ದಲ್ಲದೆ ಬಿಳಿಯರ ಆ ಗುಂಪು ತಮ್ಮೊಡನೆ ದುಂಡಾವರ್ತನೆ ಮಾಡಿತು ಎಂದು ಬಿಪಾಶ ಆರೋಪಿಸಿದ್ದಾರೆ. ಶಿಲ್ಪಾ ಶೆಟ್ಟಿ ಕಥೆ ತಣ್ಣಗಾಯಿತು. ಈಗ ಬಿಸಿ ಬಿಸಿ ಬಿಪಾಶ ಕಥೆ.












Click it and Unblock the Notifications