• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೌರಶಕ್ತಿ ವಾಟರ್ ಹೀಟರ್ ಅಳವಡಿಕೆ ಇನ್ಮುಂದೆ ಕಡ್ಡಾಯ

By Staff
|

ಬೆಂಗಳೂರು, ನ.23 : ಸೌರಶಕ್ತಿ ಉಪಕರಣಗಳು ಶ್ರೀಸಾಮಾನ್ಯರ ಕೈಗೆಟಕುವುದಿಲ್ಲ. ಹೀಗಾಗಿಯೇ ಪರ್ಯಾಯ ಇಂಧನ ಮೂಲವಾದ ಸೌರಶಕ್ತಿಯ ಬಳಕೆಯತ್ತ ಜನರು ಆಸಕ್ತರಾಗುತ್ತಿಲ್ಲ. ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲು ರಾಜ್ಯದ ಇಂಧನ ಇಲಾಖೆ ಹೊಸ ನಿಯಮ ರೂಪಿಸಿದೆ.

ಇನ್ನುಮುಂದೆ 600ಚದರ ಅಡಿ ವಿಸ್ತೀರ್ಣದ ಮನೆಗಳು, ಕೈಗಾರಿಕೆಗಳು, ಹೋಟೆಲ್, ಆಸ್ಪತ್ರೆ ಸೇರಿದಂತೆ ವಿವಿಧೆಡೆ ಸೌರಶಕ್ತಿಯ ಹೀಟರ್ ಬಳಕೆ ಕಡ್ಡಾಯವಾಗಲಿದೆ. ಈ ಬಗ್ಗೆ ಇಂಧನ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅದೇ ರೀತಿ ಸರ್ಕಾರಿ ಇಲಾಖೆಗಳ ಕಟ್ಟಗಳಲ್ಲಿ ಸಿಎಫ್ಎಲ್ ವಿದ್ಯುತ್ ದೀಪಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.

ಎಲ್ಲವೂ ಓಕೆ. ಆದರೆ, ಸೌರಶಕ್ತಿ ಹೀಟರ್ ಅಳವಡಿಕೆಗೆ ಸಮಯ ಮಿತಿಯನ್ನು ಇಲಾಖೆ ನಿಗದಿಪಡಿಸಿಲ್ಲ. ಹೀಗಾಗಿ ಸೌರಶಕ್ತಿ ಹೀಟರ್ ಬಳಕೆಯತ್ತ ಜನರ ನಿರ್ಲಕ್ಷ್ಯ ಮುಂದುವರೆಯುವ ಸಾಧ್ಯತೆಗಳಿವೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more