ಉತ್ತರ ಪ್ರದೇಶದಲ್ಲಿ 3ಕಡೆ ಬಾಂಬ್ : ಹದಿನಾಲ್ಕು ಬಲಿ
ಲಖನೌ, ನ.23 : ಲಖನೌ, ವಾರಾಣಾಸಿ ಮತ್ತು ಫೈಜಲ್ ಬಾದ್ ಸೇರಿದಂತೆ ಉತ್ತರ ಪ್ರದೇಶದ ಮೂರು ಕಡೆ ಶುಕ್ರವಾರ(ನ.23) ಮಧ್ಯಾಹ್ನ ಏಕಕಾಲದಲ್ಲಿ ಸರಣಿ ಬಾಂಬ್ ಸ್ಪೋಟಿಸಿದ್ದು, ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದು ಉಗ್ರಗಾಮಿಗಳ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ.
***
ಡಿ.14ರಿಂದ ಅಕ್ಷರ ಜಾತ್ರೆ
ಬೆಂಗಳೂರು, ನ.23 : ಉಡುಪಿಯಲ್ಲಿ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ.12ರಿಂದ 15ರವರೆಗೆ ನಡೆಯಲಿದೆ. ರಾಜಕೀಯ ಅಸ್ಥಿರತೆಗೂ, ಸಮ್ಮೇಳನಕ್ಕೂ ಸಂಬಂಧವಿಲ್ಲ. ಸಿದ್ಧತೆಗಳು ಭರದಿಂದ ಸಾಗಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಸಮ್ಮೇಳನ ಉದ್ಘಾಟಿಸುವರು ಎಂದು ಕಸಾಪ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಶುಕ್ರವಾರ ತಿಳಿಸಿದ್ದಾರೆ.
***
ಧಾರವಾಡ : ನಾಲ್ವರು ಪ್ರಯಾಣಿಕರು ಭಸ್ಮ
ಧಾರವಾಡ, ನ.23 : ಕೆಎಸ್ಆರ್ ಟಿಸಿ ಬಸ್ಸೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ನಾಲ್ವರು ಪ್ರಯಾಣಿಕರು ಭಸ್ಮಗೊಂಡಿದ್ದಾರೆ. 25ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಪುಣೆ ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ4ರಲ್ಲಿ ಶುಕ್ರವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ನತದೃಷ್ಟ ಬಸ್ ಹಾಸನದಿಂದ ಬೆಳಗಾವಿಗೆ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ಸುದ್ದಿಮನೆ)


Click it and Unblock the Notifications
