ಪಟಾಕಿ ಸಿಡಿಸುವ ಪ್ರತಿಯೊಬ್ಬರಿಗೂ ಈ ಸಂಖ್ಯೆ ಗೊತ್ತಿರಲಿ
ಬೆಂಗಳೂರು, ನ.07: ಢಂ! ಢಂ! ಢಮಾರ್ ದೀಪಾವಳಿ ಬಂದೇ ಬಂತು. ಪಟಾಕಿ ಸಿಡಿಸಬೇಕಾದರೆ ಹುಷಾರಾಗಿರಿ. ಎಷ್ಟೇ ಜಾಗ್ರತೆ ವಹಿಸಿದರೂ ಒಮ್ಮೆಮ್ಮೆ ಅವಗಡ ತಪ್ಪಿದ್ದಲ್ಲ. ಬೆಳಕಿನ ಹಬ್ಬದಂದೇ ಕಣ್ಣು ಕಳೆದುಕೊಂಡ ಎಷ್ಟೋ ಮಕ್ಕಳು ಇಂದಿಗೂ ಅಂಧಕಾರದಲ್ಲಿ ನರಳುತ್ತಿದ್ದಾರೆ. ನಿಮ್ಮ ಮಕ್ಕಳಿಗೆ ಹಾಗಾಗದಂತೆ ಜಾಗ್ರತೆ ವಹಿಸಿ.
ಕಳೆದ ವರ್ಷ 73ಮಂದಿ ಕಣ್ಣಿಗೆ ಘಾಸಿ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ 14ರ ಪೋರರೇ. ಪಟಾಕಿ ಹಚ್ಚಿದವರು, ಸುಮ್ಮನೆ ನಿಂತು ನೋಡಿದವರು, ರಸ್ತೆಯಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದವರಿಗೂ ಎಲ್ಲಿಂದಲೋ ಬಂದ ಕಿಡಿ ಕಣ್ಣು ಕಿತ್ತುಕೊಂಡಿದ್ದುಂಟು. ಹಾಗಾಗಿ ಮಕ್ಕಳು, ವೃದ್ಧರು ಎಲ್ಲರೂ ಜಾಗ್ರತೆ ವಹಿಸಬೇಕಾಗಿದೆ. ದೀಪಾವಳಿ ಬೆಳಕಿನ ಹಬ್ಬ, ಪಟಾಕಿ ಹಬ್ಬವಲ್ಲ. ಪಟಾಕಿ ಹಚ್ಚಲೇ ಬೇಕು ಅನ್ನಿಸಿದರೇ, ಸುರಕ್ಷಣೆಯ ಮುಖವಾಡಗಳನ್ನು ಪಟಾಕಿ ಅಂಗಡಿಯಲ್ಲಿಯೇ ಖರೀದಿಸಿ.
ಪಟಾಕಿ ಸಿಡಿತದಿಂದ ಸಂಭವಿಸುವ ಕಣ್ಣಿನ ಗಾಯಗಳಿಗೆ ನಾರಾಯಣ ನೇತ್ರಾಲಯ ಉಚಿತ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾಗಿದೆ. ರಾಜಾಜಿನಗರದ ಕಾರ್ಡ್ ರಸ್ತೆ ಹಾಗೂ ಹೊಸೂರು ರಸ್ತೆಯ ಬೊಮ್ಮಸಂದ್ರ ಬಳಿ ಇರುವ ನಾರಾಯಣ ನೇತ್ರಾಲಯದಲ್ಲಿ ಉಚಿತ ಪ್ರಾಥಮಿಕ ಚಿಕಿತ್ಸೆ ನೀಡುವುದಾಗಿ ಸಂಸ್ಥೆ ತಿಳಿಸಿದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : 99025 46046 ಮತ್ತು 99005 10203.
ಬೆಂಗಳೂರಿನ ಪ್ರಮುಖ ಕಣ್ಣಾಸ್ಪತ್ರೆಗಳು :
Narayana Nethralaya,
121/C 1st R Block,Chord Road,
Rajaji Nagar,
Bangalore, 560010
Phone : 080 23373311
Retina Institute Of Karnataka,
122,5th Main Road,
Chamarajpet,
Bangalore, 560018
Phone : 080 26510106
Sudharshana Nethralaya,
455,R S Plaza,Bet 6th&7th Cross,
Sampige Road, Malleshwaram,
Bangalore, 560003
Phone : 080 23341747
Surya Eye Hospital,
1012/22,4th T Block,
2nd Main, Jayanagar,
Bangalore, 560041
Phone : 080 26342356
Dr Agarwals Eye Hospital Ltd & Eye Reasearch Ctr,
15,Eagle Street, Langford Town,
Bangalore, 560025
Phone : 080 22223100
Prabha-Eye Clinic & Research Centre,
5c4,40 Cross, 8 Block,
Jayanagar, Bangalore, 560070
Phone : 080 26637041
Narayana Eye Foundation Pvt Ltd,
121/C,1st Block,Chord Road,
Rajaji Nagar, Bangalore, 560010
Phone : 080 23370122
Bhagwan Mahaveer Jain Eye Nethralaya,
3,Railway Platform Road,
Seshadripuram, Bangalore, 560020
Phone : 080 23462559
Divakars Speciality Hospital,
No 220,2nd Phase,9th Cross,
Jp Nagar, Bangalore, 560078
Phone : 080 32714452
Minto Eye Hospital,
Chamrajpet, Bangalore, 560018
Phone : 080 26707176
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications