ವಿಮಾನ ನಿಲ್ದಾಣದ ಬಳಿ ಮನೆ ಮಾಡಿ ಅಂಜಿದೊಡೆಂತಯ್ಯಾ?

ಬೆಂಗಳೂರು, ನ. 7 : ನಿತ್ಯ ಜೋರು ಶಬ್ದದ ವಿಮಾನ ನಿಲ್ದಾಣಗಳ ಆಸುಪಾಸು ವಾಸಿಸುವುದರಿಂದ ರಕ್ತದೊತ್ತಡ ತೀವ್ರವಾಗಿ ಏರುವ ಸಾಧ್ಯತೆ ಹೆಚ್ಚು ಎನ್ನುತ್ತದೆ ಲಂಡನ್ನಿನ ಒಂದು ಸಮೀಕ್ಷೆ. ಅಬ್ಬರದ ಶಬ್ದಕ್ಕೆ ಸದಾ ಮೈಯೊಡ್ಡುವುದರಿಂದ ಆರೋಗ್ಯ ಹದಗೆಡುತ್ತದೆ ಎಂದೂ ಆ ಅಧ್ಯಯನ ಎಚ್ಚರಿಸುತ್ತದೆ. ಈ ಸರ್ವೆ ನಡೆಸಿದವರು ಸ್ಟಾಕ್ ಹೋಂನಲ್ಲಿರುವ ಕರೊಲಿನ್ಸ್ಕ ಇನ್ ಸ್ಟಿಟ್ಯೂಟಿನ ಚಾರ್ ಲೋಟ ಎರಿಕ್ ಸನ್.

ಸಮೀಕ್ಷೆ ಕೈಗೆತ್ತಿಕೊಳ್ಳುವುದಕ್ಕೆ ಎರಿಕ್ ಸನ್ 2700ಮಂದಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಅವರೆಲ್ಲ 1992ರಿಂದ 2004ರ ವರೆಗೆ ಸ್ಟಾಕ್ ಹೋಂನ ಅರ್ ಲಾಂಡಾ ವಿಮಾನ ನಿಲ್ದಾಣದ ಸಮೀಪ ವಾಸಿಸುತ್ತಿದ್ದವರಾಗಿದ್ದರು. ಜೋರು ಶಬ್ದ ಮಾಲಿನ್ಯಕ್ಕೆ ಒಳಗಾದವರು ಅಂದರೆ, 50ಡೆಸಿಬಲ್ ಗಿಂತ ಹೆಚ್ಚು ಶಬ್ದದಬ್ಬರಕ್ಕೆ ಈಡಾದವರು ತೀವ್ರ ರಕ್ತದೊತ್ತಡಕ್ಕೆ ಈಡಾಗುವ ಸಾಧ್ಯತೆ ಶೇ. 19ಪಟ್ಟು ಹೆಚ್ಚು.

ಬಹುಪಾಲು ಈ ಅಪಾಯ ತಗಲುವುದು ವೃದ್ಧರಿಗೆ. ಪ್ರಾಯದ ಮಕ್ಕಳಿಗೆ ಅವರ ನೋವು ಅರ್ಥವಾಗುವುದಿಲ್ಲ. ವಯಸ್ಸಾಗುತ್ತಾ ಆಗುತ್ತಾ ಶಬ್ದದ ಹಾವಳಿ ತಡೆದುಕೊಳ್ಳುವ ಶಕ್ತಿ ಮನುಷ್ಯರಿಗೆ ಕಡಿಮೆ ಆಗಿರುತ್ತದೆ. ವಿಮಾನ ನಿಲ್ದಾಣಗಳ ಸಮೀಪ ಬಾಳ್ವೆ ನಡೆಸುವವರ ಆರೋಗ್ಯದ ಮೇಲೆ ಉಂಟಾಗುವ ಇವೇ ಮುಂತಾದ ದುಷ್ಪರಿಣಾಮಗಳ ಬಗೆಗಿನ ವಿವರಗಳನ್ನು ಜರ್ನಲ್ ಎಪಿಡಮಾಲಜಿಯಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ದರಗಳು ಆಕಾಶದೆತ್ತರಕ್ಕೆ ಜಿಗಿದಿದೆ. ದೇವನಹಳ್ಳಿ ಏರ್ ಪೋರ್ಟ್ ಇನ್ನೂ ಚಾಲೂನೇ ಆಗಿಲ್ಲ ಆಗಲೇ ರೇಟುಗಳು ಗಗನಮುಖಿಯಾಗಿವೆ. ವಿಪರೀತ ಹಣ ತೆತ್ತು ವಿಮಾನ ನಿಲ್ದಾಣದ ಬಳಿ ಮನೆ, ಫ್ಲಾಟು, ಕಚೇರಿ ಕಟ್ಟಡ ಖರೀದಿಸಿ ಶಬ್ದ ಮಾಲಿನ್ಯಕ್ಕೆ ಈಡಾಗುವುದು ಮತ್ತು ವೃದ್ಧರನ್ನು ಅಂತಹ ವಾತಾವರಣಕ್ಕೆ ತಳ್ಳುವುದು ನಿಜಕ್ಕೂ worthaa? ಅನ್ನಿಸುತ್ತದೆ.

( ದಟ್ಸ್ ಕನ್ನಡ ಸುದ್ದಿ ಮನೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+