ಯಾಹೂ : ಇಂಗ್ಲಿಷಿಗೆ ಸಮನಾದ ಹಿಂದಿ ಇಮೇಲ್ ಸೇವೆ

ನವದೆಹಲಿ, ನ.02 : ಇಂಗ್ಲಿಷ್‌ನಲ್ಲಿ ಇಮೇಲ್ ಕಳುಹಿಸಿ ಬೇಸರವಾಗಿದ್ದರೆ, ಇನ್ನು ಮುಂದೆ ಹಿಂದಿಯಲ್ಲಿ ರವಾನೆ ಮಾಡಿಕೊಳ್ಳಬಹುದು. ಇಂಗ್ಲಿಷ್‌ ಮೇಲ್‌ನ ಎಲ್ಲ ಸೌಲಭ್ಯಗಳೂ ಹಿಂದಿಯಲ್ಲೂ ಇವೆ.

ಹಿಂದಿಯಲ್ಲಿ ಅಂತರ್ಜಾಲ ಸೇವೆಯನ್ನು ಒದಗಿಸುತ್ತಿರುವ ದೇಶದ ಪ್ರಥಮ ಇಂಟರ್ನೆಟ್ ಕಂಪನಿ ಯಾಹೂ ಎಂದು ಸಂಸ್ಥೆಯ ಉಪಾಧ್ಯಕ್ಷ ಜಾನ್ ಕ್ರೀಮರ್ ತಿಳಿಸಿದ್ದಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲು ನಾವು ಪ್ರಯತ್ನಿಸುತ್ತಿದ್ದೇವೆ. ಇಮೇಲ್ ಗಳನ್ನು ಪ್ರಾದೇಶಿಕ ಭಾಷೆಗಳಲ್ಲೇ ಕಳುಹಿಸಿಕೊಂಡು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಯಾಹೂ ಮೈಲ್ ಕ್ಲಾಸಿಕ್ ಸಹಕರಿಸುತ್ತದೆ. ಯಾಹೂನಲ್ಲಿ ದೇಸಿ ಸೊಗಡನ್ನು ತುಂಬಲು ಭಾರತದ ನಮ್ಮ ಯಾಹೂ ತಂತ್ರಜ್ಞರು ಸಾಕಷ್ಟು ಶ್ರಮಿಸಿದ್ದಾರೆಂದು ಅವರು ತಿಳಿಸಿದರು.

ಮುಂಬರುವ ವರ್ಷಗಳಲ್ಲಿ 200 ದಶಲಕ್ಷ ಜನರು ಆನ್‌ಲೈನ್ ಸಂಪರ್ಕಕ್ಕೆ ಬರಲಿದ್ದಾರೆ. ಇದು ಸ್ಥಳೀಯ ಭಾಷಿಕರಿಗೆ ಅನುಕೂಲವಾಗಲಿದೆ. ಹಾಗೆಯೇ ಆಂಗ್ಲೇತರ ಭಾಷೆ ಬಳಸುವವರಿಗೆ ಅನುಕೂಲವಾಗಲಿದೆ ಎಂದು ಯಾಹೂ ಇಂಡಿಯಾದ ಮುಖ್ಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಯಾಹೂ ಮೆಸೆಂಜರ್ ಸೇವೆ ಕನ್ನಡ ಸೇರಿದಂತೆ ಭಾರತದ 9 ಭಾಷೆಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಯಾಹೂನ ಎಲ್ಲ ಸದುಪಾಯಗಳೂ ಹಿಂದಿಯಲ್ಲಿ ದೊರೆಯುತ್ತವೆಂದು ಸಂಸ್ಥೆಯ ಆರತಿ ವೇದಾಂತಂ ತಿಳಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+