ಈ ಶನಿವಾರ ಸುಚಿತ್ರ ಫಿಲಂ ಸೊಸೈಟಿಯಲ್ಲಿ 'ಮುಖಾಮುಖಿ'
ಬೆಂಗಳೂರು, ನ.02 : ನಗರದ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಶನಿವಾರ(ನ.3)'ಮುಖಾಮುಖಿ'ಚಲನಚಿತ್ರದ ಪ್ರದರ್ಶನ ಹಾಗೂ ಸಂಪದ.ಕಾಂ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿದೆ. ಸಂಪದ ಫೌಂಡೇಶನ್ನಿಗೆ ಕಾಣಿಕೆಯನ್ನು ಇದೇ ಪ್ರದರ್ಶನದ ಹೊತ್ತಿನಲ್ಲಿ ಸದಸ್ಯರು ನೀಡಬಹುದು.
ಶನಿವಾರ ಬೆಳಗ್ಗೆ 10.30ಕ್ಕೆ ಪ್ರದರ್ಶನಗೊಳ್ಳಲಿರುವ 'ಮುಖಾಮುಖಿ' ಚಿತ್ರಕ್ಕೆ 2006ನೇ ಸಾಲಿನ 'ಅತ್ಯುತ್ತಮ ಸಂಭಾಷಣೆ' ಪ್ರಶಸ್ತಿ ಸಿಕ್ಕಿದೆ. ಈ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ದತ್ತಣ್ಣ, ಕಿರುತೆರೆಯಲ್ಲಿ ಹೆಸರುವಾಸಿಯಾದ ದಿಲೀಪ್ ರಾಜ್, ಶ್ವೇತಾ ಶ್ರೀವಾತ್ಸವ್ ಇನ್ನಿತರರು ನಟಿಸಿದ್ದಾರೆ. ಕನ್ನಡದಲ್ಲಿ ಅತ್ಯಂತ ಕಲಾತ್ಮಕ ಛಾಯಾಗ್ರಾಹಕರು ಎಂದೇ ಹೆಸರು ಪಡೆದ ರಾಮಚಂದ್ರ ಐತಾಳ, ಈ ಚಿತ್ರದ ನಿರ್ಮಾಣದಲ್ಲಿ ಕೈಗೂಡಿಸಿದ್ದಾರೆ.
ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಂಪದ.ಕಾಂ ಸದಸ್ಯರಾದ ಸಿಡ್ನಿ ಸುದರ್ಶನ್ ಚಿತ್ರಕತೆ ಬರೆದು, ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.
ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು http://mukhamukhi.anivaasi.net ತಾಣದಲ್ಲಿ ನೋಡಬಹುದು. ಸೀಮಿತ ಸೀಟುಗಳಿರುವುದರಿಂದ ಭಾಗವಹಿಸಲು ಆಸಕ್ತಿಯಿರುವವರು, ಎಸ್ಎಂಎಸ್ ಅಥವಾ ಇಮೇಲ್ ಮುಖಾಂತರ ತಿಳಿಸಿದರೆ ಅನುಕೂಲ. ನಿಮ್ಮ ಹೆಸರಿನೊಂದಿಗೆ ಎಸ್ಎಂಎಸ್ ಮಾಡಬೇಕಾದ ಸಂಖ್ಯೆ : 99452 70698, 94493 93787. ಇಮೇಲ್ ವಿಳಾಸ : [email protected]
ಸ್ಥಳ : ಸುಚಿತ್ರ ಚಿತ್ರಮಂದಿರ, ಬನಶಂಕರಿ, ಬೆಂಗಳೂರು. ಸುಚಿತ್ರಗೆ ರೋಡ್ ಮ್ಯಾಪ್ ಇಲ್ಲಿದೆ ನೋಡಿ :
http://lacefilms.googlepages.com/roadmap.jpg
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications