ಮಾರ್ಚ್ 17ರಿಂದ 29ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ
ಬೆಂಗಳೂರು, ನ.02: ಮಾರ್ಚ್ 2008ರ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪೂರ್ವಾಹ್ನದ ಪರೀಕ್ಷೆಯು ಬೆಳಗ್ಗೆ 9ರಿಂದ 12ಗಂಟೆಗೆ ಹಾಗೂ ಅಪರಾಹ್ನದ ಪರೀಕ್ಷೆಯು 2ರಿಂದ 5ಗಂಟೆಯವರೆಗೆ ಇರುತ್ತದೆ. ವೇಳಾಪಟ್ಟಿ ಹೀಗಿದೆ :
ಮಾರ್ಚ್ 17 : ಬ್ಯುಸಿನೆಸ್ ಸ್ಟಡೀಸ್/ರಸಾಯನ ಶಾಸ್ತ್ರ (ಪೂರ್ವಾಹ್ನ); ಮನಶಾಸ್ತ್ರ/ಶಿಕ್ಷಣ (ಅಪರಾಹ್ನ)
ಮಾರ್ಚ್ 18 : ಕನ್ನಡ/ತಮಿಳು (ಪೂರ್ವಾಹ್ನ); ಮಲಯಾಳಂ/ಮರಾಠಿ/ಅರಾಬಿಕ್/ಫ್ರೆಂಚ್ (ಅಪರಾಹ್ನ)
ಮಾರ್ಚ್ 19 : ಅಕೌಂಟೆನ್ಸಿ/ಭೌತಸಾಸ್ತ್ರ (ಪೂರ್ವಾಹ್ನ); ಐಚ್ಚಿಕ ಕನ್ನಡ (ಅಪರಾಹ್ನ)
ಮಾರ್ಚ್ 20 : ಇಂಗ್ಲಿಷ್ (ಪೂರ್ವಾಹ್ನ)
ಮಾರ್ಚ್ 24 : ಭೂಗೋಳ ಶಾಸ್ತ್ರ/ಗಣಿತ ಶಾಸ್ತ್ರ; ಲಾಜಿಕ್/ಗೃಹ ವಿಜ್ಞಾನ(ಅಪರಾಹ್ನ)
ಮಾರ್ಚ್ 25 : ಅರ್ಥಶಾಸ್ತ್ರ (ಪೂರ್ವಾಹ್ನ)
ಮಾರ್ಚ್ 26 : ಹಿಂದಿ (ಪೂರ್ವಾಹ್ನ); ತೆಲುಗು/ಉರ್ದು/ಸಂಸ್ಕೃತ (ಅಪರಾಹ್ನ)
ಮಾರ್ಚ್ 27 : ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ/ಜೀವಶಾಸ್ತ್ರ (ಪೂರ್ವಾಹ್ನ)
ಮಾರ್ಚ್ 28 : ಇತಿಹಾಸ/ಕಂಪ್ಯೂಟರ್ ವಿಜ್ಞಾನ/ಎಲೆಕ್ಟ್ರಾನಿಕ್ಸ್ (ಪೂರ್ವಾಹ್ನ); ಭೂ ವಿಜ್ಞಾನ(ಅಪರಾಹ್ನ)
ಮಾರ್ಚ್ 29 : ಸಮಾಜಶಾಸ್ತ್ರ ಪ್ರಾಥಮಿಕ ಗಣಿತಶಾಸ್ತ್ರ (ಪೂರ್ವಾಹ್ನ); ಕರ್ನಾಟಕ/ಹಿಂದೂಸ್ತಾನಿ ಸಂಗೀತ (ಅಪರಾಹ್ನ)
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications