ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ 100 ಮೇಧಾವಿಗಳಲ್ಲಿ ಬಿನ್ ಲಾಡೆನ್ ಕೂಡ ಒಬ್ಬ!

By Staff
|
Google Oneindia Kannada News

ಲಂಡನ್, ಅ.30 : ಒಸಾಮಾ ಬಿನ್ ಲಾಡೆನ್‌ನನ್ನು ಯಾವ ಕೋನದಲ್ಲಿ ನೋಡಿದರೂ ಉಗ್ರವಾಗೇ ಕಾಣುತ್ತಾನೆ. ಆದರೆ ಬ್ರಿಟನ್‌ನ 'ಡೈಲಿ ಟೆಲಿಗ್ರಾಫ್" ಪತ್ರಿಕೆ ಮಾತ್ರ ಅವನನ್ನು ಮತ್ತೊಂದು ಕೋನದಲ್ಲಿ ಸೆರೆಹಿಡಿದಿದೆ.

ಇದು ತಮಾಷೆಯಲ್ಲ ಒಂದು ರೀತಿ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ. ಪತ್ರಿಕೆ ಕೈಗೊಂಡ ಒಂದು ಸಮೀಕ್ಷೆ ಪ್ರಕಾರ ವಿಶ್ವದ ನೂರು ಮೇಧಾವಿಗಳಲ್ಲಿ ಒಸಾಮಾ ಬಿನ್ ಲಾಡೆನ್ ಕೂಡ ಒಬ್ಬ. ಆ ಮೇಧಾವಿಗಳ ಸಾಲಿನಲ್ಲಿ ಇವನನ್ನು ನಿಲ್ಲಿಸಿದರೆ ಇವನ ಶ್ರೇಯಾಂಕ 43ನೆಯದು. ಅಂದ್ರೆ ಮೈಕ್ರೊಸಾಪ್ಟ್‌ನ ಬಿಲ್‌ಗೇಟ್ ಕೂಡಾ ಇವನ ಸಮಾನ!

ಪ್ರಪಂಚದಲ್ಲಿ ಜೀವಿಸುತ್ತಿರುವ ನೂರು ಮಂದಿ ಮೇಧಾವಿಗಳಲ್ಲಿ ಬಹಳಷ್ಟು ಜನ ಅಮೆರಿಕ, ಬ್ರಿಟನ್‌ಗಳಲ್ಲಿ ಜೀವಿಸುತ್ತಿದ್ದಾರೆಂದು ಡೈಲಿ ಟೆಲಿಗ್ರಾಫ್‌ನ ಸರ್ವೇ ತಿಳಿಸುತ್ತದೆ. ಸಮೀಕ್ಷೆ ಪ್ರಕಾರ ಅಮೆರಿಕಾದಲ್ಲಿ 43, ಬ್ರಿಟನ್‌ನಲ್ಲಿ 24 ಮೇಧಾವಿಗಳಿದ್ದಾರಂತೆ. ಬ್ರಿಟನ್‌ನಲ್ಲಿ 25ಲಕ್ಷ ಮಂದಿಗೆ ಒಬ್ಬ ಮೇಧಾವಿಯಾದರೆ, ಅದೇ ಅಮೆರಿಕಾದಲ್ಲಿ 69 ಲಕ್ಷಕ್ಕೊಬ್ಬ ಮೇಧಾವಿ. ಆ ಪ್ರಕಾರ ತುಲನೆ ಮಾಡಿದರೆ ಮೇಧಾವಿಗಳಲ್ಲಿ ಬ್ರಿಟನ್ ಮುಂದಿದೆ.

ಕಲೆ, ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರತಿಭಾವಂತರನ್ನು ಆಯ್ಕೆ ಮಾಡಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆರು ಜನ ನಿಪುಣರು ಈ ನೂರು ಜನ ಮೇಧಾವಿಗಳ ಸರ್ವೇ ನೇತೃತ್ವ ವಹಿಸಿದ್ದರು. 4 ಸಾವಿರ ಮಂದಿಯನ್ನು ಈ-ಮೈಲ್ ಮೂಲಕ ಸಂಪರ್ಕಿಸಿ ಈ ಸರ್ವೇ ಪಟ್ಟಿಯನ್ನು ರೂಪಿಸಿರುವುದಾಗಿ 'ಡೈಲಿ ಟೆಲಿಗ್ರಾಫ್" ತಿಳಿಸಿದೆ.

ಯಾರ್ಯಾರು ಬುದ್ದಿವಂತರು ?

ಸ್ವಿಡ್ಜರ್‌ಲ್ಯಾಂಡ್‌‍ನ ರಸಾಯನ ಶಾಸ್ತ್ರಜ್ಞ (ಎಲ್‌ಎನ್‌ಡಿ ಡ್ರಗ್ ಸೃಷ್ಟಿಕರ್ತ) ಆಲ್ಬರ್ಟ್ ಹಾಫ್‌ಮನ್ ಹಾಗೂ ಅಂತರ್ಜಾಲ ಸೃಷ್ಟಿಕರ್ತ (www) ಬ್ರಿಟನ್‌ ಕಂಪ್ಯೂಟರ್ ವಿಜ್ಞಾನಿ ಟಿಮ್ ಬೆರ್ನರ್ಸ್ ಲೀ ಮೊದಲ ಸ್ಥಾನದಲ್ಲಿ ನಿಲ್ಲುವ ಮೇಧಾವಿಗಳು. ಭೌತಶಾಸ್ತ್ರದ ವಿಜ್ಞಾನಿ ಸ್ಟೀಫನ್ ಹಾಕಿಂಗ್‌‍ಗೆ 7ನೇ ಸ್ಥಾನ. ನಾಟಕಕಾರ ಹೆರಾಲ್ಡ್ ಪಿಂಟರ್ 31, ಹ್ಯಾರಿಫಾಟರ್‌ ಲೇಖಕಿ ಜೆ.ಕೆ.ರೋಲಿಂಗ್ಸ್ 83, ಬಿಲ್‌ಗೇಟ್ಸ್, ಬಿನ್ ಲಾಡೆನ್ ಮತ್ತು ಬಾಕ್ಸರ್ ಮಹಮದ್ ಆಲಿಯ ಜೊತೆಗೆ ಮತ್ತೂ ಮೂವರು 43ನೆಯ ಸ್ಥಾನವನ್ನು ಹಂಚಿಕೊಂಡಿದ್ದಾರೆ. ನೆಲ್ಸನ್ ಮಂಡೇಲಾ 5, ಭಾರತೀಯ ಇತಿಹಾಸಜ್ಞ ಕೀರ್ತಿ ನಾರಾಯಣ್ ಚೌದರಿ 58, ಟಿಬೆಟ್‌ನ ಆಧ್ಯಾತ್ಮಿಕ ಗುರು ದಲೈ ಲಾಮಾ ಹಾಗೂ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ಸಂಯುಕ್ತವಾಗಿ 26ನೇ ಸ್ಥಾನದಲ್ಲಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X