ಹತ್ತು ವರ್ಷ ಮೊಬೈಲ್ ಬಳಸಿದರೆ ಕ್ಯಾನ್ಸರ್ ಉಚಿತ
ಲಂಡನ್, ಅ.8 : ಮೆಬೈಲ್ ಫೋನ್ ಬಳಕೆದಾರರೇ ಎಚ್ಚರ. ಹತ್ತು ವರ್ಷಗಳ ಕಾಲ ಮೊಬೈಲ್ ಬಳಸಿದರೆ ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು ಎಂದು ಸಂಶೋಧನೆಗಳು ತಿಳಿಸಿವೆ.
ಪ್ರತಿ ದಿನ ಒಂದು ಗಂಟೆ ಕಾಲ ಸತತವಾಗಿ ಮೊಬೈಲ್ ಬಳಸುವುದರಿಂದ ಮೆದುಳಿನಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆಯುವ ಸಾಧ್ಯತೆಗಳಿವೆ. ಮೊಬೈಲ್ ಹ್ಯಾಂಡ್‌ಸೆಟ್‌ನ್ನು ಯಾವ ಕಿವಿಗೆ ಹೆಚ್ಚು ಒಡ್ಡುತ್ತೇವೋ ಆ ಭಾಗದಲ್ಲೇ ಕ್ಯಾನ್ಸರ್ ಗಡ್ಡೆ ಬೆಳೆಯುತ್ತದೆ. ಮಕ್ಕಳ ನರವ್ಯೂಹ, ತಲೆಬುರುಡೆ ಬೆಳವಣಿಗೆಯ ಹಂತದಲ್ಲಿರುವ ಕಾರಣ ಅವರಿಗೆ ಕ್ಯಾನ್ಸರ್ ಇನ್ನೂ ಬೇಗ ಬರುವ ಸಾಧ್ಯತೆಗಳಿವೆ ಎಂದು ಅಧ್ಯಯನಗಳು ತಿಳಿಸಿವೆ.
ಯುವಕರು ಸಹ ಮೊಬೈಲ್‌ನಲ್ಲಿ ಮಾತನಾಡುವುದನ್ನು ಕಡಿಮೆ ಮಾಡಬೇಕು ಎಂದು 'Occupational Environmental Medicine' ಎಂಬ ನಿಯತಕಾಲಿಕೆ ಪ್ರಕಟಿಸಿದೆ. ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್‍ಗಳಿಂದ ಹೊರ ಹೊಮ್ಮುವ ರೇಡಿಯೇಶನ್ ಪ್ರಮಾಣ ಅಧಿಕವಾಗಿದ್ದು ಆರೋಗ್ಯಕ್ಕೆ ಹಾನಿ ಉಂಟುಮಾಡುವ ಸಾಧ್ಯತೆಯಿದೆ. ಇದನ್ನು ಬದಲಾಯಿಸಬೇಕೆಂದೂ ಪತ್ರಿಕೆ ತಿಳಿಸಿದೆ.
ಪ್ರಪಂಚದಾದ್ಯಂತ ನಡೆಸಿದ ಅಧ್ಯಯನಗಳಿಂದ ಈ ಸತ್ಯ ಹೊರಹೊಮ್ಮಿದೆ ಎಂದು ಪ್ರೊ. ಹಾರ್ಡೆಲ್ ಹಾಗೂ ಹಾನ್‌ಸನ್ ತಿಳಿಸಿದ್ದಾರೆ.
ಮೊಬೈಲ್ ಫೋನ್‌ಗಳ ದೀರ್ಘ ಬಳಕೆಯಿಂದ ಶೇ.20ರಷ್ಟು ಕಿವುಡುತನ ಹಾಗೂ ಶೇ. 30ರಷ್ಟು ಮೆದುಳಿನ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ಸ್ವೀಡನ್‌ನ ವಿಶ್ಲೇಷಣೆಯೊಂದು ಹೇಳಿದೆ.
(ಯುಎನ್‌ಐ)












Click it and Unblock the Notifications