ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಬೆಂಬಲ ವಾಪಸ್ : ರಾಜ್ಯ ಚುನಾವಣೆಗೆ ವೇದಿಕೆ ಸಜ್ಜು

By Staff
|
Google Oneindia Kannada News

Honeymoon between JDS and BJP ends on sour noteನವದೆಹಲಿ, ಅ.6 : ಕೊನೆಗೂ ತೆರೆ ಬಿದ್ದಿದೆ. ಜೆಡಿಎಸ್ ಮತ್ತು ಬಿಜೆಪಿ ನಡುವಿನ 20ತಿಂಗಳ ದೋಸ್ತಿ ಮುರಿದು ಬಿದ್ದಿದೆ. ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯಲು ಬಿಜೆಪಿ ಶನಿವಾರ(ಅ.06) ಅಂತಿಮ ತೀರ್ಮಾನ ಕೈಗೊಂಡಿದೆ. ಜೊತೆಗೆ ಕೂಡಲೇ ಮಧ್ಯಂತರ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದೆ.

ಶನಿವಾರ ನವದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ, ಬೆಂಬಲ ವಾಪಸ್ ಪಡೆಯಲು ಬಿಜೆಪಿ ನಿರ್ಧರಿಸಿತು. ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಹಿರಿಯ ಬಿಜೆಪಿ ನಾಯಕ ಮತ್ತು ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹಾ, ಇದು ಕೇವಲ ಅಧಿಕಾರ ಹಸ್ತಾಂತರದ ವಿಚಾರ ಮಾತ್ರವಲ್ಲ. ಇದು ಜೆಡಿಎಸ್ ನ ವಿಶ್ವಾಸದ್ರೋಹದ ಪ್ರಶ್ನೆ. ಈ ಪ್ರಕರಣದಿಂದ ಬಿಜೆಪಿ ಪಾಠ ಕಲಿತಿದೆ. ಭವಿಷ್ಯದಲ್ಲಿ ಪಕ್ಷ ಎಚ್ಚರಿಕೆವಹಿಸಲಿದೆ ಎಂದು ಹೇಳಿದರು.

ಬಿಜೆಪಿ ನಾಯಕ ಎಂ.ವೆಂಕಯ್ಯ ನಾಯ್ಡು ಮಾತನಾಡುತ್ತಾ, ಜೆಡಿಎಸ್ ನಂಬಿಕೆ ದ್ರೋಹವನ್ನು ಎತ್ತಿ ಹಿಡಿದರು. ಜನರು ಈ ಸಂಗತಿಯನ್ನು ಮರೆಯುವುದಿಲ್ಲ. ಕೊಟ್ಟ ಮಾತನ್ನು ಮೀರಿದರೆ ಏನಾಗುತ್ತದೆ ಎಂಬುದನ್ನು ಜನತಾ ನ್ಯಾಯಾಲಯ ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು.

ಶನಿವಾರದ ಬಿಜೆಪಿ ಸಭೆಯಲ್ಲಿ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಸುಶ್ಮಾ ಸ್ವರಾಜ್, ಎಂ.ವೆಂಕಯ್ಯ ನಾಯ್ಡು, ಅರ್ಜುನ್ ಜೇಟ್ಲಿ, ಯಶವಂತ್ ಸಿನ್ಹಾ, ಅನಂತಕುಮಾರ್, ಯಡಿಯೂರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

(ಯುಎನ್ಐ)

ಕುರ್ಚಿ ಕುಸ್ತಿ ಮುಂದೇನು?: ರಾಜಭವನದತ್ತ ಎಲ್ಲರ ಕಣ್ಣು
ಬಿಜೆಪಿಗೆ ಮಾನ ಮರ್ಯಾದೆ ಇಲ್ಲ : ಕಾಂಗ್ರೆಸ್ ಕಟು ಟೀಕೆ
ಚುನಾವಣೆಗೆ ಬಿಜೆಪಿ ರೆಡಿ..ಯಡಿಯೂರಪ್ಪ ಪರವಾಗಿ ಪೂಜೆ
ಕೋಮುವಾದಿಗಳಿಗೆ ಅಧಿಕಾರ ಕೊಡೋದಿಲ್ಲ:ಕುಮಾರಸ್ವಾಮಿ
ಮರ್ಯಾದೆಯಿಂದ ಅಧಿಕಾರ ಬಿಟ್ಟು ಕೊಡಿ : ಯಡಿಯೂರಪ್ಪ
14ನೇ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಕಂಡ ಏಳುಬೀಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X