ವಿಧಾನಸೌಧದಿ ಇ-ಗ್ರಂಥಾಲಯ; ಸಾಕ್ಷರರಾಗಿ ಶಾಸಕರೇ..
ಬೆಂಗಳೂರು, ಸೆಪ್ಟೆಂಬರ್ 20 : ವಿಧಾನಸೌಧದಲ್ಲಿ ಇ-ಗ್ರಂಥಾಲಯ ಆರಂಭಗೊಳ್ಳಲಿದೆ. ಆದರೆ ಕಂಪ್ಯೂಟರ್, ಇಂಟರ್ ನೆಟ್ ನ ತಲೆಬುಡ ಗೊತ್ತಿಲ್ಲದ ಬಹುತೇಕ ಶಾಸಕರಿಗೆ ಈ ಬಗ್ಗೆ ಆಸಕ್ತಿಯಿಲ್ಲ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ವಿಧಾನ ಪರಿಷತ್ತು ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ , ಜನವರಿ ತಿಂಗಳೊಳಗಾಗಿ ವಿಧಾನಮಂಡಲದಲ್ಲಿ ಇ-ಗ್ರಂಥಾಲಯ ಆರಂಭಗೊಳ್ಳಲಿದೆ. ಕಡಿಮೆ ಅವಧಿಯಲ್ಲಿ ಶಾಸಕರು ಬಯಸುವ ವಿಚಾರಗಳು ದೊರಕುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಶಾಸಕರ ಅರಿವಿನ ಮಟ್ಟ ಹೆಚ್ಚಿಸಲು ಅಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಕನಸಿನ ಕರ್ನಾಟಕ ಮಾಲಿಕೆ ಬಗ್ಗೆ ವಿವರ ನೀಡಿದ ಚಂದ್ರಶೇಖರ್, ಐದು ಸಂಪುಟಗಳನ್ನು ಹೊರತರಲು ನಿರ್ಧರಿಸಲಾಗಿದೆ. ಡಾ.ಚಂದ್ರಶೇಖರ ಕಂಬಾರ ಅಧ್ಯಕ್ಷತೆಯಲ್ಲಿ ಸಂಪುಟಗಳು ರೂಪುಗೊಳ್ಳುತ್ತಿವೆ. ನವೆಂಬರ್ ವೇಳೆಗೆ ಪ್ರಕಟಗೊಳ್ಳಲಿವೆ ಎಂದು ಹೇಳಿದರು.
ಸದನದಲ್ಲಿ ಚರ್ಚೆಯಾಗುವ ಪ್ರಮುಖ ವಿಚಾರ ಮತ್ತು ಉತ್ತಮ ಸಂಸದೀಯ ಪಟುಗಳ ಮಾಲಿಕೆಯನ್ನು ಹೊರತರುವುದಾಗಿ ಪ್ರೊ.ಬಿ.ಕೆ.ಚಂದ್ರಶೇಖರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications