ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಿನೆಸ್ ಮಾಡೋದಕ್ಕೆ ಪ್ರಪಂಚದಲ್ಲೀಗ ಬೆಂಗಳೂರೇ ಬೆಸ್ಟ್!

By Staff
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07 : ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಬೆಂಗಳೂರಿಗೆ ವಿದಾಯ ಹೇಳುತ್ತೇವೆ ಎಂದು ಐಟಿ ಉದ್ಯಮಿಗಳು ಆಗಾಗ ಬೆದರಿಸುತ್ತಾರೆ. ಆದರೆ ಉದ್ಯಮ ಸ್ಥಾಪನೆಗೆ ಬೆಂಗಳೂರು ಅತ್ಯುತ್ತಮ ನಗರ ಎಂಬುದನ್ನು ಸಮೀಕ್ಷೆಯೊಂದು ಸಮರ್ಥಿಸಿದೆ.

ಉದ್ಯಮ ಸ್ಥಾಪನೆಗೆ ಜಗತ್ತಿನ ಅತ್ಯುತ್ತಮ ನಗರಗಳನ್ನು ಗುರ್ತಿಸಲಾಗಿದ್ದು, ಅದರಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಸಿಎನ್ಎನ್-ಟೈಮ್ ವಾರ್ನರ್ ಸಮೂಹದ 'ಬಿಸಿನೆಸ್ 2.0'ನಿಯತಕಾಲಿಕ ತನ್ನ ಜಾಗತಿಕ ಸಮೀಕ್ಷೆಯನ್ನು ಪ್ರಕಟಿಸಿದೆ.

ಸಮೀಕ್ಷೆಯಲ್ಲಿ 12 ನಗರಗಳ ಗುರ್ತಿಸಲಾಗಿದ್ದು, ಬೆಂಗಳೂರಿನ ಅನುಕೂಲಗಳ ಬಣ್ಣಿಸಲಾಗಿದೆ. ಇಲ್ಲಿ ಕಡಿಮೆ ಸೌಲಭ್ಯ ಕೇಳುವ ಅತ್ಯುತ್ತಮ ಸಾಫ್ಟ್ ವೇರ್ ತಜ್ಞರು ಇದ್ದಾರೆ ಎಂದು ಬೆಂಗಳೂರು ಬಗ್ಗೆ ಹೇಳಲಾಗಿದೆ.

ಅತ್ಯುತ್ತಮ ನಗರಗಳ ಪಟ್ಟಿ :

1. ಲಂಡನ್
2. ಶಾಂಘೈ
3. ಸಿಂಗಪುರ
4. ಬೆಂಗಳೂರು
5. ಟೋಕಿಯೋ
6. ಹಾಂಗ್ ಕಾಂಗ್
7. ಬಾರ್ಸಿಲೋನಾ
8. ಹೆಲ್ಸಿಂಕಿ
9. ಸಿಯೋಲ್
10. ಸ್ಟಾಕ್ ಹೋಮ್
11. ಟ್ಯಾಲಿನ್
12. ಟೆಲ್ ಅವಿವ್

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X