ಶಾರೂಖ್ ರ ಚಕ್ ದೇ ಇಂಡಿಯಾಗೆ ಇನ್ನೊಂದು ಗರಿ!
ನವದೆಹಲಿ , ಸೆಪ್ಟೆಂಬರ್ 03 : ಕ್ರಿಕೆಟ್ ಅಬ್ಬರದ ಮಧ್ಯೆ ಹಾಕಿ ಆಟದ ತಾಕತ್ತನ್ನು, ದೇಶ ಪ್ರೇಮವನ್ನು ಭಾರತದಲ್ಲಿ ಎತ್ತಿ ಹಿಡಿಯಲು ಚಕ್ ದೇ ಇಂಡಿಯಾಚಿತ್ರ ಯಶಸ್ವಿಯಾಗಿದೆ. ಇಷ್ಟು ಮಾತ್ರವಲ್ಲದೇ ಬಾಕ್ಸಾಫೀಸ್ ನಲ್ಲೂ ಚಿತ್ರ ಗೆದ್ದಿದೆ.
ಶಾರುಖ್ ಖಾನ್ ಕೋಚ್ ಆಗಿ ಅಭಿನಯಿಸಿರುವ ಈ ಚಿತ್ರದಲ್ಲಿ, ಮಹಿಳಾ ಹಾಕಿ ತಂಡ ವಿಶ್ವಕಪನ್ನು ದಕ್ಕಿಸಿಕೊಳ್ಳುತ್ತದೆ. ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಈ ಚಿತ್ರ, ಸದ್ಯದಲ್ಲೇ ಆಸ್ಕರ್ ಲೈಬ್ರರಿಯಲ್ಲಿ ತನ್ನದೇ ಆದ ಮಾನ್ಯತೆ ಗಳಿಸಲಿದೆ.
ಚಕ್ ದೇ ಇಂಡಿಯಾಚಿತ್ರಕತೆಯ ಒಂದು ಪ್ರತಿಗಾಗಿ, ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ ಅಂಡ್ ಸೈನ್ಸ್ ಮನವಿ ಸಲ್ಲಿಸಿದೆ. ಕೆಲವು ವಿಶೇಷ ಚಿತ್ರಗಳ ಚಿತ್ರಕತೆಗಳ ಪ್ರತಿಯನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಈ ಪ್ರತಿಗಳ ಉಪಯೋಗವನ್ನು ಬಳಸಿಕೊಳ್ಳಬಹುದು.












Click it and Unblock the Notifications