ಹುಬ್ಬಳ್ಳಿ ನಗರಿಯಲ್ಲಿ ಸಾವಿರಾರು ಅಶ್ಲೀಲ ಸಿ.ಡಿ.ಗಳ ವಶ
ಹುಬ್ಬಳ್ಳಿ, ಆಗಸ್ಟ್ 04 : ಅಶ್ಲೀಲ ಸಿ.ಡಿ.ಗಳ ಹಾವಳಿ ಬೆಂಗಳೂರು ಮಾತ್ರವಲ್ಲ, ರಾಜ್ಯದ ಪ್ರಮುಖ ನಗರಗಳಲ್ಲೂ ಹೆಚ್ಚುತ್ತಿದೆ. ಇತರೆ ಸಿ.ಡಿ.ಗಳಂತೆಯೇ ರಾಜಾರೋಷವಾಗಿ ಅಶ್ಲೀಲ ಸಿ.ಡಿ.ಗಳ ಮಾರಾಟವೂ ಕೆಲವೆಡೆ ನಡೆಯುತ್ತಿದೆ.
25ರಿಂದ 30ರೂಪಾಯಿಗೆ ಅಶ್ಲೀಲ ಸಿ.ಡಿ.ಗಳನ್ನು ಮಾರಾಟ ಮಾಡುವ ದಂಧೆ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಎಂಬ ದೂರುಗಳನ್ವಯ, ಪೊಲೀಸರು ಕೊನೆಗೂ ಕಾರ್ಯಪ್ರವೃತ್ತರಾಗಿರುವುದು ಸಮಾಧಾನದ ಸಂಗತಿ. ಅಶ್ಲೀಲ ಸಿ.ಡಿ.ಮಾರಾಟ ಮತ್ತು ಮರು ಮುದ್ರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ 3 ಸ್ಥಳಗಳಲ್ಲಿ ದಾಳಿ ಮಾಡಿದ ಪೊಲೀಸರ ತಂಡ, 3ಸಾವಿರಕ್ಕೂ ಅಧಿಕ ಸಿ.ಡಿ.ಗಳನ್ನು ವಶಪಡಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇನ್ನೊಂದು ಅಸಹ್ಯ ಮತ್ತು ಅನ್ಯಾಯ :
ಉದ್ಯಾನನಗರಿಯ ಗಲ್ಲಿಗಲ್ಲಿಗಳಲ್ಲಿ ಮಸಣದ ಹೂವುಗಳು!?












Click it and Unblock the Notifications